×
Ad

ಸ್ವಿಸ್ ಬ್ಯಾಂಕ್‌ನ ಭಾರತೀಯ ಠೇವಣಿಯಲ್ಲಿ ಭಾರೀ ಇಳಿಕೆ

Update: 2017-06-30 16:22 IST

ಹೊಸದಿಲ್ಲಿ,ಜೂ. 30: ಸ್ವಿಟ್ಝರ್‌ಲೆಂಡ್‌ನ ಬ್ಯಾಂಕ್‌ಗಳಲ್ಲಿ ಭಾರತೀಯರ ಠೇವಣಿಯಲ್ಲಿ ಅರ್ಧದಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ. 2016ರಲ್ಲಿ 4,500 ಕೋಟಿ ರೂಪಾಯಿ(66.7 ಕೋಟಿ ಸ್ವಿಸ್ ಫ್ರಾಂಕ್) ಕಡಿಮೆಯಾಗಿದೆ ಎಂದು ವರದಿ ವಿವರಿಸಿದೆ.

2016ರಲ್ಲಿ ಭಾರತೀಯರ ಸ್ವಿಸ್ ಬ್ಯಾಂಕ್‌ನ ಠೇವಣಿಯಲ್ಲಿ ಶೇ. 45ರಷ್ಟು ಕಡಿಮೆಯಾಗಿದೆ ಎಂದು ಸ್ವಿಸ್ ನ್ಯಾಶನಲ್ ಬ್ಯಾಂಕ್ ವರದಿ ತಿಳಿಸಿದೆ. ಭಾರತದ ಠೇವಣಿಯಲ್ಲಿ ದಾಖಲೆ ಇಳಿಕೆ ಈ ಅವಧಿಯಲ್ಲಿ ಆಗಿದೆ ಎಂದು ವರದಿ ವಿವರಿಸಿದೆ.

37.7ಕೋಟಿ ಸ್ವಿಸ್‌ಫ್ರಾಂಕ್ ವ್ಯವಹಾರಸ್ಥರ ಠೇವಣಿಯಾಗಿದೆ. 9.8 ಕೋಟಿ ಸ್ವಿಸ್ ಫ್ರಾಂಕ್ ಠೇವಣಿ ಇತರ ಬ್ಯಾಂಕ್‌ಗಳ ಮೂಲಕ ಬಂದಿವೆ. ಇತರ ಠೇವಣಿ 19 ಕೋಟಿ ಸ್ವಿಸ್‌ಫ್ರಾಂಕ್ ಬೇರೆಯೇ ಇದೆ.

ಕಳೆದ 3ವರ್ಷಗಳಲ್ಲಿ ಠೇವಣಿ ಕಡಿಮೆಯಾಗುತ್ತಿದೆ ಎಂದು ವರದಿ ತಿಳಿಸಿದೆ. 2006ರಲ್ಲಿ 640ಕೋಟಿ ಸ್ವಿಸ್‌ಫ್ರಾಂಕ್(23,000ಕೋಟಿರೂಪಾಯಿ)ಭಾರತೀಯರ ಒಟ್ಟು ಠೇವಣಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News