×
Ad

ಜಿಎಸ್‌ಟಿ ಎಂದಿಗೂ ಯಶಸ್ವಿಯಾಗದು ಎಂದಿದ್ದರು ಮೋದಿ..!

Update: 2017-06-30 18:25 IST

ಹೊಸದಿಲ್ಲಿ, ಜೂ.30: ಜಿಎಸ್‌ಟಿ ಎಂದಿಗೂ ಯಶಸ್ವಿಯಾಗದು. ಸೂಕ್ತ ಮೂಲ ಸೌಕರ್ಯಗಳಿಲ್ಲದೆ ಇದರ ಅನುಷ್ಠಾನ ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು.

ಪ್ರಧಾನಿ ಹೇಳಿಕೆಯ ವೀಡಿಯೊ ದೃಶ್ಯಾವಳಿಯನ್ನು ಕಾಂಗ್ರೆಸ್ ಈಗ ಟ್ವೀಟ್ ಮಾಡಿದೆ.

ಜಿಎಸ್‌ಟಿ ಬಗ್ಗೆ ಮೋದೀಜಿ ಮತ್ತು ಬಿಜೆಪಿ ಹೊಂದಿರುವ ಭಾವನೆಯನ್ನು ಇದು ತೋರಿಸಿದೆ ಎಂದು ಈ ವಿಡಿಯೋ ದೃಶ್ಯಕ್ಕೆ ಅಡಿಬರಹ ನೀಡಲಾಗಿದೆ.

      ಜಿಎಸ್‌ಟಿ ಬಗ್ಗೆ ಹೇಳುವುದಾದರೆ ಇದು ಎಂದಿಗೂ ಯಶಸ್ವಿಯಾಗದು ಎಂಬುದು ಆರಂಭದಿಂದಲೂ ಬಿಜೆಪಿಯ, ಗುಜರಾತ್ ಸರಕಾರದ ಅಭಿಪ್ರಾಯವಾಗಿದೆ ಎಂದು ಮೋದಿ ಹೇಳುವ ದೃಶ್ಯ ಈ ವೀಡಿಯೊದಲ್ಲಿದೆ. ಅಲ್ಲದೆ ದೇಶದಾದ್ಯಂತ ಮೂಲಸೌಕರ್ಯ ಜಾಲ ಅಭಿವೃದ್ಧಿಪಡಿಸದೆ ಇದು ಅಸಾಧ್ಯವಾಗಿದೆ. ಯಾಕೆಂದರೆ ಜಿಎಸ್‌ಟಿಯ ಸ್ವರೂಪವೇ ಹಾಗಿದೆ ಎಂದು ಮೋದಿ ಹೇಳಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಮೋದೀಜಿ, ನೀವಾಡಿದ ಮಾತನ್ನು ಅಷ್ಟು ಬೇಗ ಮರೆತುಬಿಟ್ಟಿರಾ? ಸೂಕ್ತ ಮೂಲಸೌಕರ್ಯ ಅಭಿವೃದ್ಧಿಗೊಳಿಸದೆ ಜಿಎಸ್‌ಟಿಯನ್ನು ಯಾಕೆ ಅನುಷ್ಠಾನಗೊಳಿಸುತ್ತಿದ್ದೀರಿ ಎಂದು ಇನ್ನೊಂದು ಅಡಿಬರಹವನ್ನೂ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News