ಜಿಎಸ್‌ಟಿ ಪರಿಣಾಮ ಹೊಸದಿಲ್ಲಿಯಲ್ಲಿ ವ್ಯಾಪಾರ ಏರಿಕೆ
ಹೊಸದಿಲ್ಲಿ, ಜೂ. 30: ಕೇಂದ್ರ ಸರಕಾರ ಜಿಎಸ್‌ಟಿ ಘೋಷಿಸುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಎಲ್ಲ ಅಂಗಡಿಗಳ ಎದುರು ಬೃಹತ್ ಮಾರಾಟದ ಭಿತ್ತಿ ಪತ್ರಗಳನ್ನು ಅಂಟಿಸಲಾಗಿತ್ತು. ಅಂಗಡಿ ಮಾಲಕರು ತಮ್ಮ ಗೃಹೋಪಪಕರಮಗಳು ಹಾಗೂ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದರು.
ಇಲ್ಲಿನ ಲಜ್‌ಪತ್ ನಗರ ಮಾರುಕಟ್ಟೆಯಲ್ಲಿ ನಫೀಸ್ ಅಹ್ಮದ್ ಹವಾನಿಯಂತ್ರಕ ಹಾಗೂ ಲೆಡ್ ಟಿವಿಗಾಗಿ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ಅಂಗಡಿಯಿಂದ ಅಂಗಡಿಗೆ ಅಲೆಯುತ್ತಿದ್ದರು.
ನಮ್ಮ ಟಿವಿ ಚೆನ್ನಾಗಿದೆ. ಆದರೂ ನಾವು ಹೊಸ ಟಿವಿ ಖರೀದಿಸಲು ಬಯಸಿದೆವು ಎಂದು ಎಲೆಕ್ಟ್ರಾನಿಕ್ಸ್ ಪ್ಯಾರೆಡೈಸ್ ಸ್ಟೋರ್‌ನಲ್ಲಿ ಟಿವಿ ಬೆಲೆ ಪರಿಶೀಲಿಸಿ ನಕ್ಕರು. ಜಿಎಸ್‌ಟಿ ಅನ್ವಯಿಸಿದ ಕೂಡಲೇ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಆದುದರಿಂದ ನಾವು ಟಿವಿ ಕೊಳ್ಳಲು ನಿರ್ಧರಿಸಿದೆವು. ಬೆಲೆ ಕಡಿಮೆ ಇದ್ದರೆ ಓವೆನ್ ಹಾಗೂ ಇತರ ಕೆಲವು ವಸ್ತುಗಳನ್ನು ಖರೀದಿಸಬೇಕೆಂದಿದ್ದೇವೆ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಇಂದು ಮಧ್ಯರಾತ್ರಿ ನಡೆಯುವ ವಿಶೇಷ ಅಧಿವೇಶನದ ಕಾರ್ಯಕ್ರಮದಲ್ಲಿ ರಾಷ್ಟ್ರವ್ಯಾಪಿಯಾಗಿ ಈ ಏಕರೂಪಿ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲಿದೆ. ಇದರಿಂದ ಜನರು ಖರೀದಿಸುವ ಪ್ರತಿ ವಸ್ತುಗಳ ಬೆಲೆ ಹೆಚ್ಚಾಗುವ ಆಗುವ ಸಾಧ್ಯತೆ ಇದೆ.