ವಿದೇಶಗಳ ಆಗಸದಲ್ಲಿ ಹಾರಲಿದೆ ರಜಿನಿ "2.0"

Update: 2017-06-30 14:37 GMT

ಚೆನ್ನೈ, ಜೂ.30: ಭಾರತೀಯ ಸಿನೆಮಾರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ರಜಿನಿಕಾಂತ್ ಅಭಿನಯದ "2.0" ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಚಿತ್ರತಂಡ ಭಾರೀ ಪ್ರಚಾರ ಆರಂಭಿಸಿದ್ದು, ಪ್ರಮೋಶನ್ ಗಾಗಿ ವಿದೇಶಗಳಲ್ಲಿನ ಸಿನೆಮಾ ಥಿಯೇಟರ್ ಗಳಲ್ಲಿ ಹಾಟ್ ಬೆಲೂನ್ ಗಳನ್ನು ಹಾರಿಸಲಿದೆ.

ರಜಿನಿಕಾಂತ್, ಅಕ್ಷಯ್ ಕುಮಾರ್ ಅಭಿನಯಿಸಿರುವ 'ರೋಬೊ-2.0' ಸಿನಿಮಾ ಇದೀಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ರಜಿನಿಕಾಂತ್ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 12ರಂದು  'ರೋಬೊ-2.0' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದಕ್ಕೂ ಮುನ್ನ ಇದೀಗ ಏಂಜಲೀಸ್‌ನಲ್ಲಿರುವ ಹಾಲಿವುಡ್ ಪಾರ್ಕ್‌ನಲ್ಲಿ ‘2.0’  ಸಿನಿಮಾದ ಲೋಗೊ ಇರುವ ಹಾಟ್ ಬಲೂನನ್ನು ಮುಗಿಲೆತ್ತರಕ್ಕೆ ಹಾರಿ ಬಿಡುವ ಮೂಲಕ ಪ್ರಮೋಷನ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಈ ವಿಷಯವನ್ನು ಮಾಧ್ಯಮಗಳೆದುರು ಹೇಳಿಕೊಂಡಿರುವ ಲೈಕಾ ಪ್ರೊಡಕ್ಷನ್‌ನ ಮುಖ್ಯಸ್ಥರಾಗಿರುವ ರಾಜು ಮಹಾಲಿಂಗಂ, ಹಾಲಿವುಡ್ ಮಾದರಿಯಂತೆ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ಮುಂಬರುವ ಅಕ್ಟೋಬರ್‌ ತಿಂಗಳಲ್ಲಿ 'ರೋಬೊ-2.0' ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ದುಬೈ, ಲಂಡನ್, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ 'ರೋಬೋ-2.0' ಚಿತ್ರ ತೆರೆ ಕಾಣಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಆ ದೇಶಗಳಲ್ಲಿ ಹಾಟ್ ಬೆಲೂನ್ ಹಾರಿಸಲು ಚಿತ್ರತಂಡ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News