ಗುಲಾಬ್ ಜಾಮೂನ್ ಬೇಡವೆಂದ ಐಶ್
Update: 2017-07-01 11:22 IST
ಅನುರಾಗ್ ಕಶ್ಯಪ್ ನಿರ್ಮಾಣದ ‘ಗುಲಾಬ್ ಜಾಮೂನ್’ ಚಿತ್ರದಲ್ಲಿ ಬಾಲಿವುಡ್‌ನ ಜನಪ್ರಿಯ ತಾರಾದಂಪತಿಯಾದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜೊತೆಯಾಗಿ ನಟಿಸಲಿರುವುದು ಬಹುತೇಕ ಖಚಿತವಾಗಿತ್ತು. ಆದರೆ ಇದೀಗ ಬಾಲಿವುಡ್‌ನಲ್ಲಿ ಲೇಟೇಸ್ಟ್ ಆಗಿ ಕೇಳಿಬಂದಿರುವ ಸುದ್ದಿಗಳ ಪ್ರಕಾರ ಈ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುವುದಿಲ್ಲವಂತೆ. ಈ ಚಿತ್ರದ ಕಥಾಪಾತ್ರವು ತನಗೆ ಇಷ್ಟವಾಗದ ಕಾರಣ ಅದರಲ್ಲಿ ತಾನು ನಟಿಸುತ್ತಿಲ್ಲವೆಂದು ಐಶ್ ಬಹಿರಂಗಪಡಿಸಿದ್ದಾರೆ.
ಗುಲಾಬ್ ಜಾಮೂನ್‌ನ ಸ್ಕ್ರಿಪ್ಟ್‌ನಲ್ಲಿ ಒಂದಿಷ್ಟು ಮಾರ್ಪಾಡುಗಳನ್ನ ಮಾಡುವಂತೆ ಆಕೆ ನಿರ್ದೇಶಕರಿಗೆ ಸೂಚಿಸಿದ್ದರಂತೆ. ಆದರೆ ಅದಕ್ಕವರು ಒಪ್ಪದಿರುವುದೇ ಐಶ್ ಚಿತ್ರದಿಂದ ಹೊರನಡೆಯಲು ಕಾರಣವೆಂದು ಬಾಲಿವುಡ್‌ನಲ್ಲಿ ಪಿಸುಮಾತುಗಳು ಕೇಳಿಬರುತ್ತಿವೆ. ಇದೀಗ ಗುಲಾಬ್‌ಜಾಮೂನ್‌ಗಾಗಿ ನಿರ್ದೇಶಕರು ಹೊಸ ನಾಯಕಿಯ ತಲಾಶ್‌ನಲ್ಲಿ ತೊಡಗಿದ್ದಾರಂತೆ. ಅನಿಲ್ ಕಪೂರ್ ನಾಯಕನಾಗಿರುವ ಚಿತ್ರದಲ್ಲಿ ತಾನು ನಟಿಸಲಿರುವುದಾಗಿಯೂ ಆಕೆ ಹೇಳಿಕೊಂಡಿದ್ದಾರೆ.