ಹಾಲಿವುಡ್‌ಗೆ ಧನುಷ್

Update: 2017-07-01 05:59 GMT

ವಿಭಿನ್ನ ಶೈಲಿಯ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಫು ಮೂಡಿಸಿರುವ ನಟ ಧನುಷ್. ಕೇವಲ ತಮಿಳು ಮಾತ್ರವಲ್ಲ ಬಾಲಿವುಡ್‌ನಲ್ಲೂ ಗಮನಸೆಳೆಯುವಂತಹ ಅಭಿನಯ ನೀಡಿರುವ ಈ ನಟನನ್ನು ಇದೀಗ ಹಾಲಿವುಡ್ ಕೈಬೀಸಿ ಕರೆದಿದೆ.

ಖ್ಯಾತ ನಿರ್ದೇಶಕ ಕೆನ್‌ಸ್ಕಾಟ್ ನಿರ್ದೇಶನದ ‘ ದಿ ಎಕ್ಸ್‌ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್’ ಎಂಬ ಅದ್ದೂರಿ ಚಿತ್ರದಲ್ಲಿ ಧನುಷ್ ನಟಿಸುತ್ತಿದ್ದಾರೆ. ಯುರೋಪ್ ರಾಷ್ಟ್ರವಾದ ಬೆಲ್ಜಿಯಂನಲ್ಲಿ ಸುಮಾರು ಒಂದು ತಿಂಗಳ ಕಾಲ ಶೂಟಿಂಗ್‌ನಲ್ಲಿ ಪಾಲ್ಗೊಂಡ ಬಳಿಕ ಧನುಷ್, ತಾಯ್ನೊಡಿಗೆ ವಾಪಸಾಗಿದ್ದಾರೆ. ಪ್ರತಿಷ್ಠಿತ ನಿರ್ದೇಶಕರೊಬ್ಬರ ನಿರ್ದೇಶನದ ಈ ಹಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿರುವುದು ತನಗೆ ದೊರೆತ ಸೌಭಾಗ್ಯವೆಂದು ಧನುಷ್ ವಿನಯದಿಂದಲೇ ಹೇಳಿಕೊಂಡಿದ್ದಾರೆ. ಅಂದಹಾಗೆ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವು ಮುಂಬೈನಲ್ಲಿ ಕಳೆದ ಮೇನಲ್ಲಿ ನಡೆದಿತ್ತು.

ಹಾಲಿವುಡ್‌ನ ಜನಪ್ರಿಯ ‘ಕಿಲ್‌ಬಿಲ್’ ಸರಣಿ ಚಿತ್ರಗಳ ನಾಯಕಿ ಉಮ ತುರ್ಮಾನ್, ಈ ಸಿನೆಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿಕೋಲಾಸ್ ಇರೆರಾ ಸಂಗೀತ ನೀಡಿದ್ದಾರೆ. ಜೊತೆಗೆ ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರದ ಎರಡು ಹಾಡುಗಳಿಗೆ ಟ್ಯೂನ್ಸ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News