×
Ad

ಶತಕ ಬಾರಿಸಿದ 'ರಾಜಕುಮಾರ': ದಾಖಲೆಯತ್ತ 'ಬೊಂಬೆ ಹಾಡುತೈತೆ' ಹಾಡು

Update: 2017-07-01 11:41 IST

ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸುವ ಹಾದಿಯಲ್ಲಿದೆ 'ರಾಜಕುಮಾರ' ಚಿತ್ರ. ಮಾರ್ಚ್ 24ರಂದು ಬಿಡುಗಡೆಯಾಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ "ರಾಜಕುಮಾರ " ಶತದಿನ ಪೂರೈಸುತ್ತಿದ್ದಂತೆ ಚಿತ್ರತಂಡದಲ್ಲೂ ಸಂತಸ ಮನೆಮಾಡಿದೆ. 

ಜೂನ್ 30ರಂದು 'ರಾಜಕುಮಾರ' ಶತದಿನ ಪೂರೈಸಿದ್ದು, ಎಲ್ಲೆಲ್ಲೂ ಈ ಚಿತ್ರದ 'ಬೊಂಬೆ ಹಾಡುತೈತೆ' ಹಾಡು ಝೇಂಕರಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಹಾಡಿನ ಮೇನಿಯಾ ಆವರಿಸಿಕೊಂಡಿದೆ. 

ಚಿತ್ರ ಬಿಡುಗಡೆಯಾದ ಆರಂಭದಿಂದಲೂ ದಾಖಲೆಗಳನ್ನೇ ಬರೆಯುತ್ತಾ ಸಾಗಿದ ಈ ಸಿನಿಮಾ 'ಬಾಹುಬಲಿ'ಯಂತಹ ಚಿತ್ರದ ಸವಾಲನ್ನು ಎದುರಿಸಿ ಶತದಿನ ಪೂರೈಸಿದೆ. ತೆರೆಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಈಗಿನ್ನೂ ಪ್ರದರ್ಶನ ಕಾಣುತ್ತಿದೆ. 

ಈ ಮದ್ಯೆ  'ಬೊಂಬೆ ಹಾಡುತೈತೆ' ಹಾಡಿನ ಇನ್ನೊಂದು ಆವೃತ್ತಿಯನ್ನು ಚಿತ್ರತಂಡ ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆ. ಈ ಹಿಂದೆ ಅಪ್ಲೋಡ್ ಮಾಡಲಾಗಿರುವ  ಇದೇ ಹಾಡು ಈಗಾಗಲೇ ಸುಮಾರು ೩ ಕೋಟಿ ಜನ ವೀಕ್ಷಿಸಿ ದಾಖಲೆ ಬರೆದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News