ಎರಡೂವರೆ ವರ್ಷದ ಹೆಣ್ಣುಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಯುವಕರ ಬಂಧನ

Update: 2017-07-01 10:24 GMT

ಕಾಯಂಕುಳಂ(ಕೇರಳ), ಜು. 1: ಪುಟ್ಟ ಹೆಣ್ಣುಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಪುದುಪ್ಪಳ್ಳಿ ಸಾಧುಪುರದ ಬಿಬಿನ್(20),ವಾಲಾಲ್ ತರ ಎಂಬಲ್ಲಿನ ಅಖಿಲ್‌ರಾಜ್(20) ಬಂಧಿಸಲ್ಪಟ್ಟ ಆರೋಪಿಗಳಾಗಿದ್ದು, ಇವರು ಎರಡೂವರೆ ವರ್ಷದ ಹೆಣ್ಣುಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದರು.

ಕಳೆದ ಜೂ. 21ಕ್ಕೆ ಅಖಿಲ್‌ನ ಮನೆಯಲ್ಲಿ ಘಟನೆ ನಡೆದಿದೆ. ಮಗುವನ್ನು ಸ್ನಾನಮಾಡಿಸುವಾಗ ಮಗು ನೋವಿನಿಂದ ಅತ್ತದ್ದರಿಂದ ಮಗು ಕಿರುಕುಳಕ್ಕೊಳಗಾಗಿದ್ದು ಮನೆಯವರ ಗಮನಕ್ಕೆ ಬಂದಿತ್ತು. ನಂತರ ಅವರು ಕಾಯಂಕುಳಂ ಪೊಲೀಸರಿಗೆ ದೂರು ನೀಡಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಸದಾ ಅವರ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News