ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ, ಯುವರಾಜ್ ರಿಂದ "ಮ್ಯಾಚ್ ಫಿಕ್ಸಿಂಗ್": ಕೇಂದ್ರ ಸಚಿವ ಅಠಾವಳೆ

Update: 2017-07-01 15:41 GMT

ಹೊಸದಿಲ್ಲಿ, ಜು.1: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಹಾಗೂ ಇತರರು ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ರಾಮ್ ದಾಸ್ ಅಠಾವಳೆ ಆರೋಪಿಸಿದ್ದಾರೆ.

“ಅನಿಲ್ ಕುಂಬ್ಳೆಯವರಂತಹ ಕೋಚ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಹಾಗೂ ಇತರರಂತಹ ಪ್ರತಿಭಾನ್ವಿತರಿರುವ ಭಾರತ ತಂಡ ಟೂರ್ನಮೆಂಟ್ ನುದ್ದಕ್ಕೂ ಒಳ್ಳೆಯ ಪ್ರದರ್ಶನ ನೀಡಿದೆ. ಆದರೆ ಪಾಕಿಸ್ತಾನದಂತಹ ತಂಡದೆದುರು ಸೋಲಲು ಹೇಗೆ ಸಾಧ್ಯ. ಇದು ದೇಶಕ್ಕೆ ಅವಮಾನ” ಎಂದು ಗುಜರಾತ್ ನಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಅವರು ಹೇಳಿದ್ದಾರೆ.

“ಟೂರ್ನಮೆಂಟ್ ನುದ್ದಕ್ಕೂ ಅವರು ಹಲವು ಶತಕಗಳನ್ನು ಸಿಡಿಸಿದ್ದಾರೆ. ಆದರೆ ಫೈನಲ್ ಪಂದ್ಯದಲ್ಲಿ ಅವರಿಗೇನಾಯಿತು?, ಆ ಪಂದ್ಯ ಫಿಕ್ಸ್ ಆದಂತೆ ಕಂಡುಬರುತ್ತಿದೆ. ಆದ್ದರಿಂದ ತನಿಖೆ ನಡೆಯಬೇಕು” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News