ನಿಶ್ಚಿತಾರ್ಥಕ್ಕೆ ಮುನ್ನ ರಕ್ಷಿತ್-ರಶ್ಮಿಕಾ ಜೋಡಿಗೆ "ಸೈಮಾ (SIIMA)" ಉಡುಗೊರೆ
ಬೆಂಗಳೂರು, ಜು.1: "ಕಿರಿಕ್ ಪಾರ್ಟಿ" ಜೋಡಿ ರಕ್ಷಿತ್ ಶೆಟ್ಟಿ - ರಶ್ಮಿಕಾ ಮಂದಣ್ಣ ಇದೀಗ ನಿಶ್ಚಿತಾರ್ಥದ ತಯಾರಿಯಲ್ಲಿದೆ. ಈ ಸಂಭ್ರಮದಲ್ಲಿರುವ ಈ ತಾರೆಯರಿಗೆ ಅಭಿನಂದನೆಗಳಷ್ಟೇ ಅಲ್ಲ, ಪ್ರಶಸ್ತಿಗಳ ಮಹಾಪೂರವೇ ಹರಿದುಬರುತ್ತಿವೆ. ಈ ನಡುವೆ ವಿಶೇಷ ಉಡುಗೊರೆಯೆಂಬಂತೆ ಈ ಜೋಡಿಯ "ಕಿರಿಕ್ ಪಾರ್ಟಿ" ಚಿತ್ರಕ್ಕೆ "ಸೈಮಾ (SIIMA)" ಹಲವು ಅವಾರ್ಡ್ ಗಳು ಸಿಕ್ಕಿರುವುದು ಮತ್ತೊಂದು ವಿಶೇಷ.
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿ, ವಿಮರ್ಶಕರು ಹಾಗೂ ಪ್ರೇಕ್ಷಕರಿಂದ "ಶಹಬ್ಬಾಸ್" ಎನಿಸಿಕೊಂಡಿರುವ 'ಕಿರಿಕ್ ಪಾರ್ಟಿ' . 150 ದಿನಗಳತ್ತ ಕಾಲಿಡುತ್ತಿದೆ. ಈ ನಡುವೆ ಸಿಕ್ಕಿರುವ ಅವಾರ್ಡ್ ಗಳು ಚಿತ್ರತಂಡಕ್ಕೆ ಹಾಗೂ ರಕ್ಷಿತ್-ರಶ್ಮಿಕಾ ಜೋಡಿಗೆ ಮತ್ತಷ್ಟು ಖುಷಿ ನೀಡಿದೆ.
"ಕಿರಿಕ್ ಪಾರ್ಟಿ"ಗೆ ಸಿಕ್ಕ "ಸೈಮಾ (SIIMA)" ಅವಾರ್ಡ್ ಗಳು:
ಅತ್ಯುತ್ತಮ ಸಿನೆಮಾ: 'ಕಿರಿಕ್ ಪಾರ್ಟಿ'
ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ
ಉದಯೋನ್ಮುಖ ನಟಿ ಪ್ರಶಸ್ತಿ: ರಶ್ಮಿಕಾ ಮಂದಣ್ಣ
ಪೋಷಕ ನಟ ಪ್ರಶಸ್ತಿ: ಚಂದನ್ ಆಚಾರ್
ಅತ್ಯುತ್ತಮ ಸಂಗೀತ ನಿರ್ದೇಶಕ: ಬಿ ಅಜನೀಶ್ ಲೋಕನಾಥ್
ಅತ್ಯುತ್ತಮ ಗೀತೆ ರಚನಕಾರ ಪ್ರಶಸ್ತಿ: ಧನಂಜಯ್ ರಂಜನ್( 'ಬೆಳಗೆದ್ದು ಯಾರ ಮುಖವಾ...')