ಯುಪಿಎ ಆಡಳಿತದಲ್ಲೂ ಅಮಾಯಕರನ್ನು ಹೊಡೆದು ಸಾಯಿಸುವ ಘಟನೆಗಳು ನಡೆದಿವೆ: ಅಮಿತ್‌ ಶಾ

Update: 2017-07-02 11:28 GMT

ಪಣಜಿ,ಜು2: 2011ರಿಂದ 2013ರವರೆಗೆ ಯುಪಿಎ ಸರಕಾರದ ಕಾಲದಲ್ಲಿ ಜನರ ಗುಂಪುಗಳಿಂದ ಕೊಲೆಕೃತ್ಯಗಳು ಹೆಚ್ಚು ನಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಜನರಗುಂಪು ಜನರನ್ನು ಹೊಡೆದುಕೊಲ್ಲುತ್ತಿರುವ ಈಗಿನ ಘಟನೆಗಳೊಂದಿಗೆ ಹೋಲಿಸಲು ಮುಂದಾಗುವುದಿಲ್ಲ. ಆದರೆ 2011, 2012,2013 ವರ್ಷಗಳಲ್ಲಿ ಈಗ ನಡೆದುದಕ್ಕಿಂತ ಹೆಚ್ಚು ಗುಂಪುಗಳಿಂದ ಕೊಲೆಕೃತ್ಯಗಳು ಆಗಿವೆ ಎಂದು ಅಮಿತ್ ಶಾ ಹೇಳಿದರು.

ಉತ್ತರಪ್ರದೇಶದಲ್ಲಿ ಮನೆಯಲ್ಲಿ ಬೀಫ್ ಇಟ್ಟಿದ್ದಾರೆಂದು ಆರೋಪಿಸಿ ಜನರಗುಂಪು ಮುಹಮ್ಮದ್ ಅಖ್ಲಾಕ್‌ರನ್ನು ಹೊಡೆದುಕೊಂದದ್ದು ಸಮಾಜವಾದಿ ಪಾರ್ಟಿಯ ಸರಕಾರವಿದ್ದಾಗ. ಅದು ಅವರ ಹೊಣೆಗಾರಿಕೆಯಾಗಿತ್ತು. ಆದರೆ ಆಗಲೂ ಮೋದಿ ಸರಕಾರದ ವಿರುದ್ಧ ಪ್ರತಿಭಟನೆಗಳು ನಡೆದಿತದಿತ್ತು ಎಂದವರು ಹೇಳಿದರು. ಅಲ್ಪಸಂಖ್ಯಾತ ವಿಭಾಗಗಳ ವಿರುದ್ಧ ಹೆಚ್ಚಳವಾಗುತ್ತಿರುವ ಅಕ್ರಮಗಳತ್ತ ಗಮನಸೆಳೆದಾಗ “ಸರಕಾರ ಎಲ್ಲ ವಿಭಾಗದ ಜನರನ್ನು ಒಂದೇ ರೀತಿ ಪರಿಗಣಿಸುತ್ತಿದೆ” ಎಂದು ಅಮಿತ್ ಶಾ ಉತ್ತರಿಸಿದರು.

ಗೋವಾದಲ್ಲಿ ಗೋಹತ್ಯೆ ನಿಷೇಧದ ಕುರಿತ ಪ್ರಶ್ನೆಗೆ ಬಿಜೆಪಿ ಗೋಹತ್ಯೆ ನಿಷೇಧವನ್ನು ಮಾಡಿದ್ದಲ್ಲ ಎಂದ ಅಮಿತ್ ಶಾ , ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News