×
Ad

ಮೇಕೆದಾಟು ಜಲಾಶಯ ನಿರ್ಮಾಣ ಯತ್ನಕ್ಕೆ ಪಿಎಂಕೆ,ಎಂಡಿಎಂಕೆ ವಿರೋಧ

Update: 2017-07-02 19:46 IST

 ಚೆನ್ನೈ,ಜು.2: ಕಾವೇರಿ ನದಿಗೆ ಅಡ್ಡವಾಗಿ ಮೇಕೆದಾಟು ಜಲಾಶಯ ನಿರ್ಮಾಣದ ಕರ್ನಾಟಕದ ಯತ್ನಗಳಿಗೆ ರವಿವಾರ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿರುವ ಪಿಎಂಕೆ ಮತ್ತು ಎಂಡಿಎಂಕೆ, ಈ ಯೋಜನೆಗೆ ಅನುಮತಿ ನೀಡದಂತೆ ಕೇಂದ್ರವನ್ನು ಆಗ್ರಹಿಸಿವೆ.

ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣಕ್ಕಾಗಿ ಕರ್ನಾಟಕವು ಜೂ.7ರಂದು ಕೇಂದ್ರ ಜಲ ಆಯೋಗ(ಸಿಡಬ್ಲುಸಿ)ಕ್ಕೆ ಸಲ್ಲಿಸಿರುವ ವಿವರವಾದ ಯೋಜನಾ ವರದಿಯನ್ನು ತಿರಸ್ಕರಿಸುವಂತೆ ಪಿಎಂಕೆ ಮುಖ್ಯಸ್ಥ ಎಸ್.ರಾಮದಾಸ್ ಮತ್ತು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರು ಕೇಂದ್ರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕವು ಸುಳ್ಳು ವಿವರಗಳನ್ನು ಸಲ್ಲಿಸಿ ಯೋಜನೆಗೆ ಅನುಮತಿ ಪಡೆದುಕೊಳ್ಳಲು ಬಯಸಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ ರಾಮದಾಸ್, ಜಲಾಶಯ ನಿರ್ಮಾಣ ವಾದರೆ ಮಾತ್ರ ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣದ ಆದೇಶದಂತೆ ತಾನು ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯ ಎಂದು ಅದು ಕೇಂದ್ರಕ್ಕೆ ತಿಳಿಸಿದೆ. ಅಲ್ಲದೆ ನೀರನ್ನು ಹೊಸ ಜಲಾಶಯದಿಂದ ಮಾತ್ರ ಪಡೆದುಕೊಳ್ಳಲಾಗುವದು ಎಂದೂ ಅದು ತನ್ನ ವರದಿಯಲ್ಲಿ ಹೇಳಿದೆ. ಇವೆಲ್ಲ ಸಿಡಬ್ಲುಸಿ ಮತ್ತು ತಮಿಳುನಾಡು ಸರಕಾರವನ್ನು ವಂಚಿಸಲು ನೀಡಲಾಗಿರುವ ಭರವಸೆಗಳಾಗಿವೆ ಮತ್ತು ಇವನ್ನು ನಂಬುವಂತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News