ನಾಗರಿಕರ ಹತ್ಯೆ: ಶ್ರೀನಗರದಲ್ಲಿ ಪ್ರತಿಭಟನೆ
Update: 2017-07-02 22:50 IST
ಶ್ರೀನಗರ, ಜು. 2: ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಎನ್‌ಕೌಂಟರ್ ನಡೆಸಿದ ಸಂದರ್ಭ ಇಬ್ಬರು ನಾಗರಿಕರು ಹತ್ಯೆಯಾಗಿರುವುದನ್ನು ಪ್ರತಿಭಟಿಸಿ ಕಾಶ್ಮೀರದಲ್ಲಿ ರವಿವಾರ ಬಂದ್ ನಡೆಸಲಾಯಿತು.
ಅನಂತ್‌ನಾಗ್ ಜಿಲ್ಲೆಯ ಬ್ರಿಂಟಿ ಡಯಾಲ್‌ಗಾಂವ್ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆ ಉಗ್ರರ ವಿರುದ್ಧ ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಯುವಕ ಬಲಿಯಾಗಿದ್ದರು.
ಪ್ರತ್ಯೇಕತಾವಾದಿ ಮೂವರು ನಾಯಕರಾದ ಸಯ್ಯದ್ ಅಲಿ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್ ಹಾಗೂ ಯಾಸಿನ್ ಮಲ್ಲಿಕ್ ಬಂದ್‌ಗೆ ಕರೆ ನೀಡಿದ್ದರು. ಬಂದ್‌ನಿಂದಾಗಿ ರಾಜಧಾನಿ ಕಾಶ್ಮೀರ ಹಾಗೂ ಇತರ ಜಿಲ್ಲೆಗಳ ಕೇಂದ್ರಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು.