ವಿರಾಜಪೇಟೆಯಲ್ಲಿ "ಕಿರಿಕ್" ಜೋಡಿಯ ವಿವಾಹ ನಿಶ್ಚಿತಾರ್ಥ
Update: 2017-07-03 20:07 IST
ಬೆಂಗಳೂರು, ಜು.7: "ಕಿರಿಕ್ ಪಾರ್ಟಿ" ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನೆರವೇರಿತು.
ರಶ್ಮಿಕಾ ತವರಲ್ಲಿ ಈ ಸಮಾರಂಭ ಆಯೋಜಿಸಲಾಗಿದ್ದು, ಕೊಡವ ಹಾಗೂ ತುಳುನಾಡಿನ ಬಂಟ ಸಮುದಾಯದ ಸಂಪ್ರದಾಯಗಳೂ ಸಮ್ಮಿಳಿತವಾಯಿತು. ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸುದೀಪ್, ಪುನೀತ್ ರಾಜ್ ಕುಮಾರ್, ವಿಜಯ ರಾಘವೇಂದ್ರ, ಮೊದಲಾದ ಗಣ್ಯರು ಭಾಗವಹಿಸಿದರು.