ಮದ್ಯಕ್ಕೆ ದ್ರವ ಸಾರಜನಕ ಬೆರೆಸಿ ಕುಡಿದ !

Update: 2017-07-03 15:25 GMT

ಹೊಸದಿಲ್ಲಿ, ಜು.3: ಹೊಸದಿಲ್ಲಿಯಲ್ಲಿ ಬಾರ್‌ಗೆ ತೆರಳಿದ ವ್ಯಕ್ತಿಯೋರ್ವ ತಿಳಿಯದೇ ಸಾರಜನಕ ಬೆರೆಸಿದ ಮದ್ಯ ಸೇವಿಸಿ ಗಂಬೀರಗೊಂಡಿದ್ದಾನೆ. 30ರ ಹರೆಯದ ವ್ಯಕ್ತಿಯೋರ್ವ ಬಾರ್‌ಗೆ ಆಗಮಿಸಿ ಕಾಕ್‌ಟೈಲ್‌ಗೆ ಆರ್ಡರ್ ಮಾಡಿದ. ಬಾರ್‌ನವರು ಪೂರೈಸಿದ ಮದ್ಯದಿಂದ ಹೊಗೆ ಏಳುತ್ತಿತ್ತು. ಆದರೆ, ಹೊಗೆ ಏಳುತ್ತಿರುವುದು ದ್ರವ ಸಾರಜನಕದಿಂದ ಎಂಬುದು ಅರಿಯದ ಆ ವ್ಯಕ್ತಿ ಮದ್ಯವನ್ನು ಒಂದೇ ಗುಟುಕಿಗೆ ಕುಡಿದಿದ್ದರು.

ಕೂಡಲೇ ಅವರ ಹೊಟ್ಟೆ ಊದಿಕೊಂಡಿತು. ತೀವ್ರವಾದ ನೋವು ಕಾಣಿಸಿಕೊಂಡಿತು. ಉಸಿರಾಟಕ್ಕೆ ತೊಂದರೆ ಉಂಟಾಯಿತು. ಆತನನ್ನು ಗೊರೆಗಾಂವ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಶಸ್ತ್ರಚಿಕ್ತಿತ್ಸೆ ನಡೆಸಿದ ವೈದ್ಯರು ರೋಗಿಯ ಹೊಟ್ಟೆ ಒಳಗೆ ದೊಡ್ಡ ತೂತಾಗಿದೆ ಎಂದು ಹೇಳಿದ್ದಾರೆ.

  ಆತ ಕುಡಿದಿರುವುದು ದ್ರವ ಸಾರಜನಕ. ಅದರ ಕುದಿಯುವ ಬಿಂದು 195.8 ಸೆಲ್ಸಿಯಸ್. ಆಹಾರ ಹಾಗೂ ಪಾನೀಯಗಳನ್ನು ಶಿತಲೀಕರಿಸಲು ಇದು ಬಳಸಲಾಗು ತ್ತದೆ. ಬಣ್ಣರಹಿತ ದ್ರವ ಸಾರಜನಕವನ್ನು ಕಂಪ್ಯೂಟರ್‌ಗಳನ್ನು ತಂಪಾಗಿ ಇರಿಸಲು ಬಳಸಲಾಗುತ್ತದೆ. ಘನೀಕರಿಸಿದ ಸಾರಜನಕವನ್ನು ನರುಲಿ ಹಾಗೂ ಕ್ಯಾನ್ಸರ್ ಅಂಗಾಂಶಗಳನ್ನು ನಾಶ ಮೊದಲಾದ ವೈದ್ಯಕೀಯ ಚಿಕಿತ್ಸೆಗೆ ಬಳಸಲಾಗುತ್ತದೆ. ಸಾರಜನಕ ಪೂರ್ಣವಾಗಿ ಆವಿಯಾದ ಬಳಿಕ ಅದನ್ನು ಪಾನೀಯಗಳನ್ನು ಶಿತಲೀಕರಿಸಲು ಬಳಸಲಾಗುತ್ತದೆ.

ಮದ್ಯವನ್ನು ಕುಡಿದ ಮೇಲೆ ನನಗೆ ಅಹಿತಕರ ಅನುಭವವಾಯಿತು. ಬಾರ್ ಅಟೆಂಡರ್ ನನಗೆ ಇನ್ನೊಂದು ಗ್ಲಾಸ್ ಮದ್ಯ ನೀಡಿದ. ಅದನ್ನೂ ನಾನು ಕುಡಿದೆ. ಇದರಿಂದ ಇನ್ನಷ್ಟು ಅಹಿತಕರ ಅನುಭವವಾಯಿತು. ಅಲ್ಲದೆ ನನ್ನ ಹೊಟ್ಟೆ ಕೆಲವೇ ಕ್ಷಣಗಳಲ್ಲಿ ಊದಿಕೊಂಡಿತು. ನನಗೆ ಸಹಿಸಲು ಅಸಾಧ್ಯವಾದ ನೋವು ಉಂಟಾಯಿತು. ಉಸಿರಾಡಲೂ ತೊಂದರೆಯಾಯಿತು ಹೆಸರು ಹೇಳಲಿಚ್ಛಿಸದ ವ್ಯಕ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News