ತಮಿಳುನಾಡು ಸರಕಾರದಿಂದ ರೈತರ ಸಾಲಮನ್ನಾ: ಹೈಕೋರ್ಟ್ ಆದೇಶ ತಡೆಹಿಡಿದ ಸುಪ್ರೀಂಕೋರ್ಟ್

Update: 2017-07-03 15:37 GMT

ಹೊಸದಿಲ್ಲಿ, ಜು. 13: ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರೂ ಸೇರಿದಂತೆ ಎಲ್ಲ ರೈತರಿಗೂ ಬೆಳೆ ಸಾಲ ಮನ್ನಾ ಯೋಜನೆ ವಿಸ್ತರಿಸಬೇಕು ಎಂದು ತಮಿಳುನಾಡು ಸರಕಾರಕ್ಕೆ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಹಿಡಿದಿದೆ.

 ಉಚ್ಚ ನ್ಯಾಯಾಲಯ ನೀಡಿದ ಆದೇಶಕ್ಕೆ ನ್ಯಾಯಮೂರ್ತಿ ಬಿ. ಲೋಕೂರು ನೇತೃತ್ವದ ಪೀಠ ತಡೆಯಾಜ್ಞೆ ನೀಡಿದೆ ಸಾಲ ಮನ್ನಾ ಯೋಜನೆಯಿಂದ 5 ಎಕರೆಗಿಂತ ಕೆಳಗಿನ ಹಾಗೂ ಸಣ್ಣ, ಮಧ್ಯಮ ಕೃಷಿಕರು ಲಾಭ ಪಡೆಯಲಿದ್ದಾರೆ ಎಂದು ಸರಕಾರ ವಾದಿಸಿತ್ತು. ಈ ರೈತರು ಕೊ-ಆಪರೇಟಿವ್ ಬ್ಯಾಂಕ್ ಹಾಗೂ ಸೊಸೈಟಿಗಳಿಂದ ಸಾಲ ಪಡೆದುಕೊಂಡಿದ್ದರು.

 ಉಚ್ಚ ನ್ಯಾಯಾಲಯದ ಮಧುರೈ ಪೀಠ ಸರಕಾರದ ಆರ್ಥಿಕ ನೀತಿ ನಿರ್ಧಾರದಲ್ಲಿ ಮಧ್ಯೆ ಪ್ರವೇಶಿಸುತ್ತಿದೆ ಎಂದು 2017 ಏಪ್ರಿಲ್ 7ರಂದು ರಾಜ್ಯ ಸರಕಾರ ವಾದಿಸಿತ್ತು. ಆದೇಶ ಕಾರ್ಯಗತಗೊಳಿಸಲು ಉಚ್ಚ ನ್ಯಾಯಾಲಯ ಮೂರು ತಿಂಗಳು ಗಡು ನೀಡಿತ್ತು. ಆದುದರಿಂದ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News