ಅನುಮತಿ ಪತ್ರದೊಂದಿಗೆ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಗೋರಕ್ಷಕರು
Update: 2017-07-03 21:34 IST
ಸೋನಾಪುರ, ಜು.3: ಸೂಕ್ತ ದಾಖಲೆಗಳೊಂದಿಗೆ ಜಾನುವಾರುಗಳನ್ನು ಟ್ರಕ್ ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಗೋರಕ್ಷಕ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಅಸ್ಸಾಂನ ಸೋನಾಪುರದಲ್ಲಿ ನಡೆದಿದೆ.
ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ತನ್ನ ಬಳಿ ಅನುಮತಿ ಪತ್ರವಿದೆ ಎಂದು ಟ್ರಕ್ ಚಾಲಕ ಹೇಳಿದರೂ ಗೋರಕ್ಷಕರು ಹಲ್ಲೆ ಮುಂದುವರಿಸಿದ್ದಾರೆ.
ಅಹ್ಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಗೋಭಕ್ತಿಯ ಹೆಸರಿನಲ್ಲಿ ಕೊಲೆ ನಡೆಸುವುದನ್ನು ಒಪ್ಪಲಾಗದು. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮಹಾತ್ಮಾ ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸಬೇಕು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾವುದೇ ವ್ಯಕ್ತಿಗೆ ಅವಕಾಶವಿಲ್ಲ” ಎಂದಿದ್ದರು.
ಆದರೆ ಪ್ರಧಾನಿಯ ಭಾಷಣದ ನಂತರವೂ ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಮೇಲೆ ದಾಳಿಗಳು ನಡೆಯುತ್ತಲೇ ಇವೆ.