ನ್ಯಾಯಾಂಗ ನಿಂದನೆ: ಅರುಂಧತಿ ರಾಯ್ ವಿರುದ್ಧದ ಪ್ರಕರಣಕ್ಕೆ ತಡೆ
Update: 2017-07-03 21:38 IST
ಹೊಸದಿಲ್ಲಿ, ಜೂ. 3: ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಬಗೆಗಿನ ನ್ಯಾಯಾಂಗ ನಿಂದನೆಗೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಮಾವೋವಾದಿಗಳ ಬಗ್ಗೆ ಸಹಾನಭೂತಿ ಹೊಂದಿದ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ದಿಲ್ಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾದ್ಯಾಪಕ ಜಿ.ಎನ್. ಸಾಯಿಬಾಬ ಅವರಿಗೆ ಜಾಮೀನು ನೀಡದ ಹಿನ್ನೆಲೆಯಲ್ಲಿ ಅರುಂಧತಿ ರಾಯ್ 2015ರಲ್ಲಿ ನ್ಯಾಯಾಲಯದ ವಿರುದ್ಧ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಸ್ವಯಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಅರುಂಧತಿ ರಾಯ್ ಅವರು ನಾಗಪುರ ಪೀಠದ ಕಲಾಪವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನಾಗಪುರ ಪೀಠದ ಕಲಾಪ ಪ್ರಶ್ನಿಸಿ ಅರುಂಧತಿ ರಾಯ್ ಸಲ್ಲಿಸಿದ ಮನವಿ ಸ್ವೀಕರಿಸಿರುವ ಮುಖ್ಯನ್ಯಾಯಮೂರ್ತಿ ಜೆ.ಎಸ್. ಖೆಹರ್ ನೇತೃತ್ವದ ನ್ಯಾಯಪೀಠ ಕಲಾಪಕ್ಕೆ ತಡೆಯಾಜ್ಞೆ ನೀಡಿದೆ.