ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಕೇಂದ್ರ ಸಚಿವ ಕಿರಣ್ ರಿಜಿಜು ಅಪಾಯದಿಂದ ಪಾರು
Update: 2017-07-04 18:52 IST
ಅರುಣಾಚಲ ಪ್ರದೇಶ, ಜು.4: ಹವಾಮಾನ ವೈಪರಿತ್ಯದಿಂದಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಸಂಚರಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಸಚಿವರು ಅಪಾಯದಿಂದ ಪಾರಾಗಿದ್ದಾರೆ.
ಗುವಾಹಟಿಯಿಂದ ಅರುಣಾಚಲ ಪ್ರದೇಶಕ್ಕೆ ರಿಜಿಜು ಹಾಗೂ ಇತರ ಏಳು ಮಂದಿ ಹೊರಟಿದ್ದ ಹೆಲಿಕಾಪ್ಟರ್ ಭಾರೀ ಮಳೆ ಹಾಗೂ ಮಂಜು ಆವರಿಸಿದ್ದರಿಂದ ತುರ್ತು ಲ್ಯಾಂಡಿಂಗ್ ನಡೆಸಿದೆ.
ಬಿಎಸ್ ಎಫ್ ಗೆ ಸೇರಿದ ಪೈಲಟ್ ಗಳು ಹವಾಮಾನ ವೈಪರಿತ್ಯದ ನಡುವೆಯೂ ಸುರಕ್ಷಿತವಾಗಿ ಇಟಾನಗರದ ಬಯಲುಪ್ರದೇಶದಲ್ಲಿ ಹೆಲಿಕಾಪ್ಟರನ್ನು ಲ್ಯಾಂಡ್ ಮಾಡುವಲ್ಲಿ ಸಫಲರಾಗಿದ್ದಾರೆ.
“ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಅನುಭವಿಗಳಾದ ಬಿಎಸ್ ಎಫ್ ಪೈಲಟ್ ಗಳಿಗೆ ಧನ್ಯವಾದಗಳು” ಎಂದು ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ.