ಎಸ್ಸಿ/ಎಸ್ಟಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಶಿಕ್ಷಾರ್ಹ ಅಪರಾಧ: ದಿಲ್ಲಿ ಹೈಕೋರ್ಟ್

Update: 2017-07-04 17:36 GMT

ಹೊಸದಿಲ್ಲಿ, ಜು.4: ಫೇಸ್‌ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣದಲ್ಲಿ ಎಸ್ಸಿ/ಎಸ್ಟಿ ಸಮುದಾಯದ ವಿರುದ್ಧ ಅವಹೇಳನಕಾರಿ ಬರಹಗಳನ್ನು ಪೋಸ್ಟ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.

  ಆದರೆ ಸಮುದಾಯದ ಯಾವುದೇ ವ್ಯಕ್ತಿಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೆ ಸಾಮಾನ್ಯ ರೀತಿಯಲ್ಲಿ ನೀಡುವ ಹೇಳಿಕೆ ಎಸ್ಸಿ/ಎಸ್ಟಿ ಸಮುದಾಯ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)ರಡಿ ಅಪರಾಧವಲ್ಲ ಎಂದು ನ್ಯಾಯಮೂರ್ತಿ ವಿಪಿನ್ ಸಿಂಘಿ ತಿಳಿಸಿದ್ದಾರೆ.

  ತಾನು ‘ಧೋಬಿ’ ಸಮುದಾಯಕ್ಕೆ ಸೇರಿದವಳೆಂದು ತನ್ನ ಅತ್ತಿಗೆ ಸದಾ ಹೀಯಾಳಿಸುತ್ತಾಳೆ. ಅಲ್ಲದೆ ಫೇಸ್‌ಬುಕ್‌ನಲ್ಲಿ ತನ್ನ ಜಾತಿ ಬಗ್ಗೆ ಅವಮಾನಕರ ಬರಹಗಳನ್ನು ಪೋಸ್ಟ್ ಮಾಡಿದ್ದಾಳೆ ಎಂದು ದೂರಿ ಮಹಿಳೆಯೋರ್ವರು ಎಫ್‌ಐಆರ್ ದಾಖಲಿಸಿದ್ದಳು. ಆದರೆ ‘ಫೇಸ್‌ಬುಕ್’ ಗೋಡೆಯ ಮೇಲೆ ಈ ಹೇಳಿಕೆ ಇದ್ದು ಇದನ್ನು ಫಿರ್ಯಾದುದಾರರು ನೋಡದಂತೆ ಬ್ಲಾಕ್ ಮಾಡಲಾಗಿತ್ತು ಎಂದು ಹೇಳಿದ್ದ ‘ಅತ್ತಿಗೆ’, ಎಫ್‌ಐಆರ್ ರದ್ದುಗೊಳಿಸಬೇಕೆಂದು ಕೋರಿದ್ದಳು. ಈ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಮಹಿಳೆ ತನ್ನ ಫೇಸ್‌ಬುಕ್‌ನ ‘ಗೋಡೆ’ಯ ಮೇಲೆ ಈ ಬರಹ ಬರೆದಿರುವುದರಿಂದ ಇದು ಸಮುದಾಯದ ಯಾವುದೇ ವ್ಯಕ್ತಿಯ ನ್ನು ಉಲ್ಲೇಖಿಸಿಲ್ಲ. ಆದ್ದರಿಂದಎಫ್‌ಐಆರ್ ರದ್ದುಗೊಳಿಸಬಹುದು ಎಂದು ತೀರ್ಪು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News