ಗೋಮಾಂಸ ಪತ್ತೆಗೆ ಕಿಟ್‌ಗಳನ್ನು ಬಳಸಲಿರುವ ಮಹಾರಾಷ್ಟ್ರ ಪೊಲೀಸರು..!

Update: 2017-07-07 13:06 GMT

ಹೊಸದಿಲ್ಲಿ,ಜು.7: ದಾಳಿ ಸಂದರ್ಭಗಳಲ್ಲಿ ವಶಪಡಿಸಿಕೊಂಡ ಮಾಂಸವು ಗೋಮಾಂಸವೇ ಎನ್ನುವುದನ್ನು ತಿಳಿದುಕೊಳ್ಳಲು ಮಹಾರಾಷ್ಟ್ರ ಪೊಲೀಸರು ಶೀಘ್ರವೇ ಮಾಂಸ ಪತ್ತೆ ಕಿಟ್‌ಗಳನ್ನು ಬಳಸಲಿದ್ದಾರೆ.

ಈ ಕಿಟ್ ಮಾಂಸವನ್ನು ವಶಪಡಿಸಿಕೊಂಡ ಸ್ಥಳದಲ್ಲಿಯೇ ಅದನ್ನು ತಪಾಸಣೆಗೊಳ ಪಡಿಸಿ 30 ನಿಮಿಷಗಳಲ್ಲಿ ಫಲಿತಾಂಶವನ್ನು ನೀಡುತ್ತದೆ ಎಂದು ವಿಧಿವಿಜ್ಞಾನ ಪ್ರಯೋಗ ಶಾಲೆಯ ನಿರ್ದೇಶಕ ಕೃಷ್ಣ ಕುಲಕರ್ಣಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಇದು ಸ್ಯಾಂಪಲ್‌ಗಳು ಗೋಮಾಂಸವೆಂದು ದೃಢಪಟ್ಟರೆ ಪ್ರಕರಣದ ತ್ವರಿತ ದಾಖಲಾತಿಗೆ ನೆರವಾಗುತ್ತದೆ ಮತ್ತು ಅಧಿಕಾರಿಗಳು ವಾಹನಗಳನ್ನು ವಶಪಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.

8,000 ರೂ.ವೌಲ್ಯದ ಒಂದು ಕಿಟ್ ಕನಿಷ್ಠ 100 ಸ್ಯಾಂಪಲ್‌ಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದ್ದು, ರಾಜ್ಯಾದ್ಯಂತ 45 ವಿಧಿವಿಜ್ಞಾನ ವಾಹನಗಳಿಗೆ ಇವುಗಳನ್ನು ವಿತರಿಸಲಾಗುವುದು ಎಂದು ಕುಲಕರ್ಣಿ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಗೋಮಾಂಸ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಲಾಗಿದೆ. ಗೋಮಾಂಸವನ್ನು ಮಾರಾಟ ಮಾಡುವವರು ಅಥವಾ ಅದನ್ನು ತಮ್ಮ ವಶದಲ್ಲಿ ಹೊಂದಿರುವವರು ಸಿಕ್ಕಿಬಿದ್ದರೆ ದಂಡ ತೆರುವ ಜೊತೆಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News