ಫಿಫಾ ಯು-17 ವಿಶ್ವಕಪ್; ಭಾರತಕ್ಕೆ ಅಮೆರಿಕ ಮೊದಲ ಎದುರಾಳಿ

Update: 2017-07-07 18:23 GMT

  ಹೊಸದಿಲ್ಲಿ, ಜು.7: ಭಾರತದಲ್ಲಿ ಮುಂಬರುವ ಅಕ್ಟೋಬರ್ 6ರಿಂದ 28ರ ತನಕ ನಡೆಯಲಿರುವ ಫಿಫಾ ಅಂಡರ್ 17 ವಿಶ್ವಕಪ್‌ನಲ್ಲಿ ಭಾರತದ ಫುಟ್ಬಾಲ್ ತಂಡ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ.

ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಅ.6ರಂದು ನಡೆಯಲಿರುವ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಭಾರತಕ್ಕೆ ಅಮೆರಿಕ ಎದುರಾಳಿಯಾಗಿದೆ.
ಅ.9ರಂದು ಕೊಲಂಬಿಯಾ ಮತ್ತು ಅ.12ರಂದು ಘಾನಾ ತಂಡವನ್ನು ಭಾರತ ಎದುರಿಸಲಿದೆ.

  ಇಂದು ಮುಂಬೈನಲ್ಲಿ ಡ್ರಾ ಮೂಲಕ ವಿವಿಧ ಗುಂಪುಗಳಿಗೆ ತಂಡಗಳ ಆಯ್ಕೆ ನಡೆಯಿತು.
ಭಾರತ ‘ಎ’ ಗುಂಪಿನಲ್ಲಿ ಅಮೆರಿಕ, ಕೊಲಂಬಿಯಾ ಮತ್ತು ಘಾನಾ ತಂಡವನ್ನು ಎದುರಿಸಲಿದೆ.
  ದೇಶದ ವಿವಿಧ ರಾಜ್ಯಗಳ 6 ಕ್ರೀಡಾಂಗಣಗಳಲ್ಲಿ ಯುವ ವಿಶ್ವಕಪ್‌ನ ಪಂದ್ಯಗಳು ನಡೆಯಲಿದೆ.
ಎರಡು ಬಾರಿ ಚಾಂಪಿಯನ್ ಆಗಿದ್ದ ಘಾನ ತಂಡಕ್ಕೆ ಅ.6ರಂದು ಕೊಲಂಬಿಯಾದ ಸವಾಲು ಎದುರಾಗಲಿದೆ.

ವಿವಿಧ ಗುಂಪುಗಳಲ್ಲಿ ಸ್ಥಾನ ಪಡೆದ ತಂಡಗಳು
ಗ್ರೂಪ್ -ಎ : ಭಾರತ, ಅಮೆರಿಕ, ಕೊಂಬಿಯಾ, ಘಾನಾ.
ಗ್ರೂಪ್ -ಬಿ: ಪರಾಗ್ವೆ, ಮಾಲಿ, ನ್ಯೂಝಿಲೆಂಡ್,ಟರ್ಕಿ
 ಗ್ರೂಪ್ -ಸಿ: ಇರಾನ್, ಗಿನಿಯಾ, ಜರ್ಮನಿ, ಕೋಸ್ತರಿಕಾ
 ಗ್ರೂಪ್-ಡಿ: ಉತ್ತರ ಕೊರಿಯಾ, ನೈಜರ್, ಬ್ರೆಝಿಲ್, ಸ್ಪೇನ್.
ಗ್ರೂಪ್ -ಈ: ಹೊಂಡುರಾಸ್, ಜಪಾನ್, ನ್ಯೂಕ್ಯಾಲೆಡೊನಿಯಾ, ಫಾನ್ಸ್
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News