×
Ad

ಐಸಿಸಿ ಪುರುಷರ ಅಂತರ್ರಾಷ್ಟ್ರೀಯ ಟಿ20 ಆಟಗಾರರ ರ‍್ಯಾಂಕಿಂಗ್ | ಮೇಲಕ್ಕೇರಿದ ಮಾರ್ಕ್ ಚಾಪ್ಮನ್, ಶಹೀನ್ ಅಫ್ರಿದಿ

Update: 2024-04-24 22:03 IST

ಶಹೀನ್ ಅಫ್ರಿದಿ |   PC : NDTV  

ದುಬೈ : ಐಸಿಸಿ ಪುರುಷರ ಟಿ20 ಇಂಟರ್ನ್ಯಾಶನಲ್ ಆಟಗಾರರ ಹೊಸ ರ‍್ಯಾಂಕಿಂಗ್ ನಲ್ಲಿ ನ್ಯೂಝಿಲ್ಯಾಂಡ್ ಬ್ಯಾಟರ್ ಮಾರ್ಕ್ ಚಾಪ್ಮನ್ ಮತ್ತು ಪಾಕಿಸ್ತಾನದ ಬೌಲರ್ ಶಹೀನ್ ಅಫ್ರಿದಿ ಮೇಲಕ್ಕೆ ಜಿಗಿದಿದ್ದಾರೆ. ನ್ಯೂಝಿಲ್ಯಾಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪ್ರಸಕ್ತ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರು ನೀಡಿರುವ ನಿರ್ವಹಣೆಯು ಅವರ ರ‍್ಯಾಂಕಿಂಗನ್ನು ಹೆಚ್ಚಿಸಿದೆ.

ಮೂರನೇ ಪಂದ್ಯದಲ್ಲಿ ಚಾಪ್ಮನ್ 42 ಎಸೆತಗಳಲ್ಲಿ ಸಿಡಿಸಿರುವ 87 ರನ್ ಗಳಿಂದಾಗಿ ಅವರು ಬ್ಯಾಟರ್ಗಳ ಪಟ್ಟಿಯಲ್ಲಿ 12 ಸ್ಥಾನಗಳನ್ನು ಜಿಗಿದು 33ನೇ ಸ್ಥಾನ ಪಡೆದಿದ್ದಾರೆ. ಎರಡನೇ ಪಂದ್ಯದಲ್ಲಿ ಶಹೀನ್ 13 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಉರುಳಿಸಿದ ಪರಿಣಾಮವಾಗಿ ಅವರು ಬೌಲರ್ಗಳ ಪಟ್ಟಿಯಲ್ಲಿ ಎರಡು ಸ್ಥಾನ ಮೇಲಕ್ಕೇರಿ 17ನೇ ಸ್ಥಾನ ಗಳಿಸಿದ್ದಾರೆ.

ನ್ಯೂಝಿಲ್ಯಾಂಡ್ ವಿಕೆಟ್ಕೀಪರ್ ಬ್ಯಾಟರ್ ಟಿಮ್ ಸೇಫರ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ 27ನೇ ಸ್ಥಾನದಿಂದ 24ನೇ ಸ್ಥಾನಕ್ಕೆ ಏರಿದ್ದಾರೆ. ಅದೇ ವೇಳೆ, ಅವರದೇ ತಂಡದ ಲೆಗ್ ಸ್ಪಿನ್ನರ್ ಇಶ್ ಸೋದಿ ಬೌಲರ್ಗಳ ಪಟ್ಟಿಯಲ್ಲಿ 23ನೇ ಸ್ಥಾನದಿಂದ 18ನೇ ಸ್ಥಾನಕ್ಕೆ ಜಿಗಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News