ಸೋಲಿನ ಸುಳಿಯಲ್ಲಿರುವ ಆರ್‌ ಸಿ ಬಿ ಐಪಿಎಲ್ ಪ್ಲೇ ಆಫ್ ಗೆ ಅರ್ಹತೆ ಪಡೆಯುವುದೇ?

Update: 2024-04-25 15:58 GMT

PC : PTI 

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಸೋಲುವ ಮೂಲಕ ಸೋಲಿನ ಕೂಪದಲ್ಲಿದೆ.

ಎಫ್ ಡು ಪ್ಲೆಸಿಸ್ ನೇತೃತ್ವದ ಆರ್‌ ಸಿ ಬಿ ತಂಡ ಕೇವಲ 2 ಅಂಕ ಹಾಗೂ -1.046 ನೆಟ್ ರನ್ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಕಳಪೆ ಪ್ರದರ್ಶನ ನೀಡಿರುವ ಹೊರತಾಗಿಯೂ ಆರ್‌ ಸಿ ಬಿಗೆ ಅಗ್ರ ನಾಲ್ಕರ ಹಂತ ತಲುಪುವ ಅವಕಾಶವಿದೆ. ಹೇಗೆ ಎಂಬುದು ಇಲ್ಲಿದೆ..

*ನಾಲ್ಕನೇ ಸ್ಥಾನ ಪಡೆಯಲು ಆರ್‌ ಸಿ ಬಿ ಏನು ಮಾಡಬೇಕು?

ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವನ್ನು ಸೃಷ್ಟಿಸಿಕೊಳ್ಳಲು ಉಳಿದ ಎಲ್ಲ 6 ಪಂದ್ಯಗಳನ್ನು ಗೆಲ್ಲಬೇಕು ಹಾಗೂ ತನ್ನ ನೆಟ್ ರನ್ರೇಟ್ ಅನ್ನು ಗಣನೀಯವಾಗಿ ಸುಧಾರಿಸಿಕೊಳ್ಳಬೇಕು. ಎಲ್ಲ ಆರು ಪಂದ್ಯಗಳನ್ನು ಜಯಿಸಿದರೆ ಆರ್‌ ಸಿ ಬಿಗೆ 14 ಅಂಕ ಲಭಿಸುತ್ತದೆ. ಇದು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಲು ಸಾಕಾಗುತ್ತದೆ.

ಅಗ್ರ ಮೂರು ತಂಡಗಳಾದ ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಹೈದರಾಬಾದ್ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಆರ್‌ ಸಿ ಬಿ ಮುಂಬರುವ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್(ಎರಡು ಬಾರಿ), ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.

ಆರ್‌ ಸಿ ಬಿ ಮೂರನೇ ಸ್ಥಾನ ಪಡೆಯಬಹುದೇ?

ಅತ್ಯಂತ ಅಸಂಭವವಾದ ಸನ್ನಿವೇಶದಲ್ಲಿ ಅಗ್ರ ಮೂರು ತಂಡಗಳು ಹಠಾತ್ತನೆ ಕಳಪೆ ಪ್ರದರ್ಶನ ನೀಡಿದರೆ, ತಮ್ಮ ಉಳಿದ ಪಂದ್ಯಗಳಲ್ಲಿ ತಲಾ ಒಂದು ಪಂದ್ಯವನ್ನು ಗೆಲ್ಲಲು ಮಾತ್ರ ಯಶಸ್ವಿಯಾದರೆ ಆರ್‌ ಸಿ ಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಬಹುದು.

ಹೈದರಾಬಾದ್ ವಿರುದ್ಧ ಸೋತರೂ ಆರ್‌ ಸಿ ಬಿ ಅರ್ಹತೆ ಪಡೆಯುವುದೇ?

ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ ಸಿ ಬಿ ಸೋತರೆ, ಅದು ಗಳಿಸಬಹುದಾದ ಗರಿಷ್ಠ ಅಂಕ 12 ಆಗಿರುತ್ತದೆ. ಉಳಿದ ತಂಡಗಳ ಫಲಿತಾಂಶದ ಆಧಾರದ ಮೇಲೆ ಅರ್ಹತೆಗೆ ಇದು ಸಾಕಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News