×
Ad

ಉಪರಾಷ್ಟ್ರಪತಿ ಚುನಾವಣೆ: 9 ನಾಮಪತ್ರ ಸಲ್ಲಿಕೆ

Update: 2017-07-08 18:36 IST

ಹೊಸದಿಲ್ಲಿ, ಜು.8: ಆಗಸ್ಟ್ 5ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇದರಲ್ಲಿ ನಾಲ್ಕು ನಾಮಪತ್ರಗಳನ್ನು ಚುನಾವಣಾಧಿಕಾರಿಗಳು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ನಾಮಪತ್ರದ ಜೊತೆ 15,000 ರೂ. ಠೇವಣಿ ಇಟ್ಟಿಲ್ಲ ಮತ್ತು ಮತದಾರರ ಪಟ್ಟಿಯ ದೃಢೀಕೃತ ಪ್ರತಿಯನ್ನು ಇರಿಸದ ಕಾರಣ ಈ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಜುಲೈ 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಅಂದು ಉಳಿದ ಐದು ಅರ್ಜಿಗಳೂ ತಿರಸ್ಕೃತವಾಗುವುದು ಖಚಿತವಾಗಿದೆ. ಈ ನಾಮಪತ್ರಗಳನ್ನು 20 ಮತದಾರರು ಸೂಚಿಸಿಲ್ಲ ಮತ್ತು 20 ಮತದಾರರು ಅನುಮೋದಿಸಿಲ್ಲ. ಇಲ್ಲಿ ಮತದಾರರು ಎಂದರೆ ಸಂಸದ್ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು.

ಎರಡೂ ಸದನಗಳ ಒಟ್ಟು ಬಲ 790 ಆಗಿದ್ದು ಕೆಲವು ಸ್ಥಾನಗಳು ಕಾಲಿಯಿವೆ. ಎನ್‌ಡಿಎ ಅಥವಾ ವಿಪಕ್ಷಗಳು ಇದುವರೆಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News