ಮುಂದಿನವಾರ 'ಹೊಸ ಅನುಭವ'
ಬೆಂಗಳೂರು, ಜು.8: ಬಿಲ್ಡರ್ ಆಗಿದ್ದು, ಸಿನಿಮಾರಂಗದ ಮೇಲಿನ ಆಸಕ್ತಿಯಿಂದ ಚಿತ್ರರಂಗ ಸೇರಿಕೊಂಡು, ನಿರ್ಮಾಣದ ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಇದು ಸಿನಿಮಾ ರಂಗದೊಳಗೆ ಚಿತ್ರತಂಡದ ಹೊಸ ಅನುಭವವನ್ನು ಹೇಳುವ ಕತೆ ಎಂದು ರಮಣಪ್ಪ ಹೇಳಿದರು.
ಹಿರಿಯ ನಿರ್ದೇಶಕ ಎಸ್. ಉಮೇಶ್ ಈ ಹಿಂದೆ ತುಂಬಿದ ಮನೆಯಂಥ ಚಿತ್ರಗಳನ್ನು ನೀಡಿರುವ ನಿರ್ದೇಶಕರಾಗಿದ್ದು, 'ಚಿತ್ರದಲ್ಲಿ ಸಂಚಾರಿ ವಿಜಯ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆದರೆ ಪೂರ್ಣ ಪ್ರಮಾಣದ ನಾಯಕರಾಗಿ ನಿರ್ಮಾಪಕರೇ ನಟಿಸಿದ್ದಾರಂತೆ. ಅಂದಹಾಗೆ ಕಾಶೀನಾಥ್ ರ ಅನುಭವಕ್ಕೂ ಈ ಹೊಸ ಅನುಭವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ಸಹ ನಿರ್ಮಾಪಕ ಕೆ ಪದ್ಮನಾಭನ್ ಚಿತ್ರದಲ್ಲಿ ಖಳನಟನ ಪಾತ್ರ ಮಾಡಿದ್ದಾರೆ. ಗೋಲ್ಡ್ ಗೋವಿಂದ ಎಂಬ ಪಾತ್ರ ನಿರ್ವಹಿಸಿರುವ ಇವರು, ಒಂದು ಹಾಡನ್ನೂ ಹಾಡಿರುವುದು ವಿಶೇಷ. ನಾಯಕಿ ಯಶಸ್ವಿನಿ ಕ್ಲಾಸಿಕಲ್ ನೃತ್ಯಗಾತಿಯಾಗಿದ್ದು, ಇದು ತಮಗೆ ಪ್ರಥಮ ಚಿತ್ರ ಎಂದರು. ನಟಿ ರುದ್ರಾಣಿ ದೇವಿ, ಛಾಯಾಗ್ರಾಹಕ ಬಿ ವಿ ರಮೇಶ್, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿರಿಯ ಪ್ರತಿಭೆಗಳಾದ ಎಸ್. ನಾರಾಯಣ್, ಭವ್ಯಾ ಮೊದಲಾದವರು ಚಿತ್ರದಲ್ಲಿರುವುದು ವಿಶೇಷ. ಎ ಟಿ ರವೀಶ್ ಚಿತ್ರದ ಸಂಗೀತ ನಿರ್ದೇಶಕರು. ಹಂಚಿಕೆದಾರ ವಿಜಯ್.
ಬಿಎನ್ ರವಿ ಮುಂದಿನವಾರ ಚಿತ್ರವನ್ನು 25 ಥಿಯೇಟರ್ ಗಳಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಹಾಡುಗಳ ಸಿಡಿಯನ್ನು ಬಿಡುಗಡೆಗೊಳಿಸಿದ ಲಹರಿ ಸಂಸ್ಥೆಯ ಮಾಲಕ ವೇಲು ಮಾತನಾಡಿ 'ಚಿತ್ರದ ನಿರ್ಮಾಪಕರಲ್ಲೊಬ್ಬರೂ ಆಗಿರುವ ನಿರ್ದೇಶಕ ಉಮೇಶ್ ಪ್ರತಿಭಾವಂತರಾಗಿದ್ದು, ಈ ಚಿತ್ರದ ಮೂಲಕವಾದರೂ ಅವರು ಆರ್ಥಿಕವಾಗಿ ಸದೃಢವಾಗಲಿ' ಎಂದು ಹಾರೈಸಿದರು.