×
Ad

​ವಿಶ್ವ ಪರಂಪರೆ ನಗರವಾಗಿ ಅಹ್ಮದಾಬಾದ್

Update: 2017-07-09 09:47 IST

ಹೊಸದಿಲ್ಲಿ, ಜು. 9: ಯುನೆಸ್ಕೊ ವಿಶ್ವಪರಂಪರೆ ನಗರ ಪಟ್ಟಿಗೆ ಸೇರ್ಪಡೆಯಾದ ಭಾರತದ ಮೊಟ್ಟಮೊದಲ ನಗರ ಎಂಬ ಹೆಗ್ಗಳಿಕೆಗೆ ಅಹ್ಮದಾಬಾದ್ ಪಾತ್ರವಾಗಿದೆ.

ಪೋಲಂಡ್‌ನ ಕಾರ್ಕೋವ್‌ನಲ್ಲಿ ನಡೆದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಅಹ್ಮದಾಬಾದ್ ನಗರವನ್ನು ಪಟ್ಟಿಗೆ ಆಯ್ಕೆ ಮಾಡಲಾಗಿದೆ.

ಯುನೆಸ್ಕೊ ಘೋಷಣೆ ಬಳಿಕ ಟ್ವೀಟ್ ಮಾಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, "ಅಹ್ಮದಾಬಾದ್ ನಗರಕ್ಕೆ ವಿಶ್ವಪರಂಪರೆ ನಗರ ಎಂಬ ಗೌರವ ಸಂದಿರುವುದು ರೋಮಾಂಚನ ಮೂಡಿಸಿದೆ. ಈ ಹೆಗ್ಗಳಿಕೆ ಪಡೆದ ಮೊಟ್ಟಮೊದಲ ಭಾರತೀಯ ನಗರ" ಎಂದು ಸಂತಸ ಹಂಚಿಕೊಂಡಿದ್ದಾರೆ.

ಹನ್ನೊಂದನೇ ಶತಮಾನದಲ್ಲಿ ರೂಪುಗೊಂಡ ಅಹ್ಮಾದಾಬಾದ್ ನಗರದಲ್ಲಿ ಭಾರತೀಯ ಪ್ರಾಚ್ಯವಸ್ತು ಇಲಾಖೆ ಸಂರಕ್ಷಿತ 36 ನಿರ್ಮಿತಿಗಳಿವೆ. ಜತೆಗೆ ಸಮುದಾಯಗಳು ನಿರ್ಮಿಸಿದ ನೂರಾರು ಪುರಾತನ ವಾಸ್ತುಶಿಲ್ಪಗಳನ್ನೊಳಗೊಂಡ ಕಟ್ಟಡಗಳಿವೆ. ಅಹ್ಮದಾಬಾದ್ ಮಹಾನಗರಪಾಲಿಕೆಯಲ್ಲಿ ಐತಿಹಾಸಿಕ ಸ್ಥಳಗಳ ಪುನರುಜ್ಜೀವನಕ್ಕೇ ಪ್ರತ್ಯೇಕ ಘಟಕವನ್ನು ಆರಂಭಿಸಲಾಗಿದೆ.

2016ರಲ್ಲಿ ಸಂಸ್ಕೃತಿ ಸಚಿವಾಲಯ, ಯುನೆಸ್ಕೊಗೆ ಪ್ರಸ್ತಾವನೆ ಸಲ್ಲಿಸಿ, ದೆಹಲಿ, ಮುಂಬೈ ಹಾಗೂ ಅಹ್ಮದಾಬಾದ್ ನಗರವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News