×
Ad

1.5ಕೋ. ರೂ. ವೆಚ್ಚದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಸಿದ್ಧತೆ!

Update: 2017-07-09 12:32 IST

ಮುಂಬೈ, ಜು.9: ವಿಕ್ಟೋರಿಯ ಟರ್ಮಿನಸ್‌ಗೆ ಮರಾಠ ಕಿಂಗ್ ಶಿವಾಜಿ ಹೆಸರನ್ನು ಮರು ನಾಮಕರಣಗೊಳಿಸಿದ 21 ವರ್ಷಗಳ ಬಳಿಕ 1.5 ಕೋ.ರೂ. ವೆಚ್ಚದಲ್ಲಿ ಶಿವಾಜಿ ಪ್ರತಿಮೆಯೊಂದನ್ನು ಸ್ಥಾಪಿಸಲು ರೈಲ್ವೇಸ್ ನಿರ್ಧರಿಸಿದೆ. ಪಿ ಡಿಮೆಲ್ಲೊ ರೋಡ್‌ನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನ ಮುಖ್ಯದ್ವಾರದಲ್ಲಿ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಮುಂಬೈನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪನೆಯಾಗುತ್ತಿರುವ ಶಿವಾಜಿಯ ಆರನೆ ಮುಖ್ಯ ಪ್ರತಿಮೆಯಾಗಿದೆ.

ಗೇಟ್‌ವೇ ಆಫ್ ಇಂಡಿಯಾ, ಮುಂಬೈ ಅಂತಾರಾಷ್ಟ್ರೀೀಯ ಏರ್‌ಪೋರ್ಟ್,ದಾದರ್‌ನ ಶಿವಾಜಿ ಪಾರ್ಕ್, ಜುಹು ಬೀಚ್ ಹಾಗೂ ಚೆಂಬೂರ್‌ನಲ್ಲಿ ಈಗಾಗಲೇ ಶಿವಾಜಿ ಪ್ರತಿಮೆ ಸ್ಥಾಪಿಸಲಾಗಿದೆ. ರಾಜ್ಯ ಸರಕಾರ ಈಗಾಗಲೇ ಅರಬ್ಬಿಸಮುದ್ರದಲ್ಲಿ ಸುಮಾರು 3,800 ಕೋ.ರೂ. ವೆಚ್ಚದಲ್ಲಿ ದೊಡ್ಡ ಶಿವಾಜಿಯ ಬೃಹತ್ ಪ್ರತಿಮೆ ಸ್ಥಾಪಿಸಲು ನಿರ್ಧರಿಸಿದ್ದು, ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಾಗಿದೆ.

ಮುಂದಿನವಾರ ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಶಿವಾಜಿ ಪ್ರತಿಮೆಯ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರತಿಮೆಯನ್ನು ಜೆಜೆ ಸ್ಕೂಲ್ ಆಫ್ ಆರ್ಟ್ಸ್ ಹಾಗೂ ವಾಸ್ತುಶಿಲ್ಪಿ ವಿದ್ಯಾರ್ಥಿಗಳು ರಚಿಸಲಿದ್ದು, ಇನ್ನೊಂದು ವರ್ಷದಲ್ಲಿ ಪ್ರತಿಮೆ ರಚನೆಯಾಗಲಿದೆ.

ಪ್ರತಿಮೆ ಸ್ಥಾಪನೆಗೆ 1.5 ಕೋ.ರೂ. ವೆಚ್ಚವಾಗಲಿದೆ. ಒಂದು ವರ್ಷದೊಳಗೆ ಪ್ರತಿಮೆ ಸ್ಥಾಪನೆಯಾಗಲಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News