ಎತ್ತುಗಳನ್ನು ಖರೀದಿಸಲು ಹಣವಿಲ್ಲ: ಹೆಣ್ಣು ಮಕ್ಕಳ ಸಹಾಯದಿಂದ ಹೊಲ ಉಳುತ್ತಿರುವ ರೈತ
Update: 2017-07-09 16:11 IST
ಮಧ್ಯಪ್ರದೇಶ, ಜು.9: ಆರ್ಥಿಕ ಸಂಕಷ್ಟದಿಂದ ಎತ್ತುಗಳನ್ನು ಖರೀದಿಸಲು ಅಶಕ್ತನಾದ ರೈತನೋರ್ವ ಎತ್ತುಗಳ ಬದಲಿಗೆ ತನ್ನ ಇಬ್ಬರು ಹೆಣ್ಮಕ್ಕಳ ಸಹಾಯದಿಂದ ಹೊಲ ಉಳುತ್ತಿರುವ ಘಟನೆ ವರದಿಯಾಗಿದೆ.
ಹೊಲ ಉಳುಮೆ ಮಾಡಲು ಎತ್ತುಗಳನ್ನು ಖರೀದಿಸಲು ತನ್ನ ಬಳಿ ಹಣವಿಲ್ಲ ಎಂದು ಮಧ್ಯಪ್ರದೇಶದ ರೈತ ಸರ್ದಾರ್ ಕಹ್ಲಾ ಹೇಳುತ್ತಾರೆ.
“ಎತ್ತುಗಳನ್ನು ಖರೀದಿಸಲೋ ಅಥವಾ ಅವುಗಳ ಆರೈಕೆ ಮಾಡಲು ನನ್ನ ಬಳಿ ಹಣವಿಲ್ಲ. ಆರ್ಥಿಕ ಅಡಚಣೆಯಿಂದ ನನ್ನ ಇಬ್ಬರೂ ಪುತ್ರಿಯರು ಶಾಲೆ ಬಿಟ್ಟು ಹೊಲ ಉಳುತ್ತಿದ್ದಾರೆ” ಎಂದು ಅವರು ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲೆಯ ಅಧಿಕಾರಿಯೊಬ್ಬರು ಪ್ರಕರಣದ ಬಗ್ಗೆ ಜಿಲ್ಲಾಡಳಿತ ಗಮನಹರಿಸಿದೆ. ಸರಕಾರಿ ಯೋಜನೆಗಳನ್ನು ಬಳಸಿ ರೈತನಿಗೆ ಸೂಕ್ತ ಸಹಾಯ ನೀಡಲಾಗುವುದು. ಹೊಲ ಉಳಲು ಮಕ್ಕಳನ್ನು ಬಳಸಬೇಡಿ ಎಂದು ಸೂಚನೆ ನೀಡಲಾಗಿದೆ” ಎಂದಿದ್ದಾರೆ.