ಕನ್ನಡದ ಹುಡುಗನ ಹಾಲಿವುಡ್ ಹಾಡು: ಯೂಟ್ಯೂಬ್ ನಲ್ಲಿ ಹಿಟ್ ಆದ "ರಿಯಲ್ ಗಯ್" ಆಲ್ಬಂ

Update: 2017-07-09 13:48 GMT

ಬೆಂಗಳೂರು, ಜು.9: ಬೆಳಗಾವಿಯ ಚಿಕ್ಕೋಡಿಯ 19ರ ಹರೆಯದ ಶ್ರೇಣಿಕ್ ಎಂಬ ಯುವಕನ ಇಂಗ್ಲಿಷ್ ಆಲ್ಬಂ ಹಾಡೊಂದು ಇದೀಗ ವೈರಲ್ ಆಗಿದ್ದಿ, ಕೇವಲ ಪಿಯುಸಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಶ್ರೇಣಿಕ್ ನ ಖ್ಯಾತಿ ದಿನೇದಿನೇ ಹೆಚ್ಚುತ್ತಿದೆ.

ಇಂಗ್ಲಿಷ್ ಭಾಷೆಯ "ರಿಯಲ್ ಗಯ್" ಆಲ್ಬಂನಲ್ಲಿ ಶ್ರೇಣಿಕ್ ಸ್ವತಃ ತಾನೇ ನಟಿಸಿದ್ದು, ಈ ಆಲ್ಬಂನನ್ನು ಝೀ ಮ್ಯೂಸಿಕ್ ಕಂಪೆನಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲದಿನಗಳಲ್ಲೇ ಯೂಟ್ಯೂಬ್ ನಲ್ಲಿ ಹಿಟ್ ಆಗಿರುವ ಈ ಹಾಡನ್ನು ನೋಡಿ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಆಲ್ಬಂನ ನಿರ್ಮಾಣ, ಗಾಯನ ಹಾಗೂ ನಟನೆಯೊಂದಿಗೆ ಶ್ರೇಣಿಕ್ ಮಿಂಚಿದ್ದು, ನಟಿ ರಾಧಿಕಾ ಕುಮಾರಸ್ವಾಮಿ, ನಟ ಪ್ರೇಮ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News