ಗದಾಫಿ ಜೊತೆಗೆ ಬಾಲಿವುಡ್ ನಟಿ: ವೈರಲ್ ಆಗುತ್ತಿದೆ 15 ವರ್ಷಗಳ ಹಿಂದಿನ ಫೋಟೊ

Update: 2017-07-10 14:09 GMT

ಹೊಸದಿಲ್ಲಿ, ಜು.10: ಲಿಬಿಯಾದ ಮಾಜಿ ಸರ್ವಾಧಿಕಾರಿ ಮುಅಮ್ಮರ್ ಗದಾಫಿ ಜೊತೆಗೆ ತಾನು ಹಾಗೂ ಇತರ ಮಾಡೆಲ್ ಗಳು ನಿಂತಿರುವ ಹಳೆಯ ಫೋಟೊವೊಂದನ್ನು ರೂಪದರ್ಶಿ ಶಮಿತಾ ಸಿಂಘಾ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಈ ಚಿತ್ರದಲ್ಲಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್.

“ಫ್ಯಾಶನ್ ಶೋ ಒಂದರಲ್ಲಿ ಪಾಲ್ಗೊಳ್ಳಲು 15 ವರ್ಷಗಳ ಹಿಂದೆ ಲಿಬಿಯಾಕ್ಕೆ ತೆರಳಿದ್ದು, ಹಾಗೂ ಗದ್ದಾಫಿಯವರನ್ನು ಭೇಟಿಯಾದದ್ದು. ಈ ಪ್ರವಾಸ ನೆನಪಿದೆಯೇ” ಎಂದು ಬರೆದಿರುವ ಶಮಿತಾ ಈ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

15 ವರ್ಷಗಳ ಹಿಂದಿನ ಫೋಟೊ ಇದೀಗ ವೈರಲ್ ಆಗುತ್ತಿದ್ದು, ಸಾವಿರಾರು ಲೈಕ್ ಗಳನ್ನು ಗಳಿಸಿದೆ. ಈ ಫೋಟೊದಲ್ಲಿ ಕತ್ರಿನಾ ಕೈಫ್, ನೇಹಾ ದೂಪಿಯಾ, ಅದಿತಿ ಗೌತ್ರಿಕರ್, ಅಚಲ್ ಕುಮಾರ್ ಹಾಗೂ ಶಮಿತಾ ಸಿಂಘಾ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News