6,000 ಎನ್‌ಜಿಒಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದು ಸಾಧ್ಯತೆ
ಹೊಸದಿಲ್ಲಿ,ಜು.10: ಸತತ ಐದು ವರ್ಷಗಳ ಅವಧಿಗೆ ತಮ್ಮ ವಾರ್ಷಿಕ ಆಯವ್ಯಯ ವರದಿಗಳನ್ನು ಸಲ್ಲಿಸದಿದ್ದಕ್ಕಾಗಿ ಸುಮಾರು 6,000 ಎನ್‌ಜಿಒಗಳಿಗೆ ಗೃಹ ಸಚಿವಾಲಯವು ಶೋ ಕಾಸ್ ನೋಟಿಸ್‌ಗಳನ್ನು ಹೊರಡಿಸಿದ್ದು, ಈ ಎನ್‌ಜಿಒಗಳು ವಿದೇಶಿ ದೇಣಿಗೆ ಗಳನ್ನು ಸ್ವೀಕರಿಸಲು ಹೊಂದಿರುವ ಪರವಾನಿಗೆಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಜು.8ರಂದು ಈ ನೋಟಿಸ್‌ಗಳನ್ನು ಹೊರಡಿಸಲಾಗಿದ್ದು, ಉತ್ತರಿಸಲು ಜು.23ರವರೆಗೆ ಕಾಲಾವಕಾಶ ನೀಡಲಾಗಿದೆ.
ಈ ವರ್ಷದ ಮೇ ತಿಂಗಳಿನಲ್ಲಿ ಗೃಹ ಸಚಿವಾಲಯವು ಜೂ.14ರೊಳಗೆ 2010-11ರಿಂದ 2014-15ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಬಾಕಿಯುಳಿದಿ ರುವ ತಮ್ಮ ಆಯವ್ಯಯ ವರದಿಗಳನ್ನು ಯಾವುದೇ ದಂಡವಿಲ್ಲದೆ ಸಲ್ಲಿಸಲು 18,523 ಎನ್‌ಜಿಒಗಳಿಗೆ ಒಂದು ಬಾರಿಯ ಅವಕಾಶವನ್ನು ನೀಡಿತ್ತು. ಈ ಎನ್‌ಜಿಒಗಳು ವಿದೇಶಿ ದೇಣಿಗೆಗಳು (ನಿಯಂತ್ರಣ) ಕಾಯ್ದೆಯಡಿ ನೋಂದಣಿಗೊಂಡಿವೆ.
ಆದರೆ 5,922 ಎನ್‌ಜಿಒಗಳು ಮೂರು ಅಥವಾ ಮೂರು ವರ್ಷಗಳಿಗೂ ಹೆಚ್ಚಿನ ವಾರ್ಷಿಕ ಆಯವ್ಯಯ ವರದಿಗಳನ್ನು ಸಲ್ಲಿಸಲು ವಿಫಲವಾಗಿವೆ.