×
Ad

ಲಂಡನ್ ಮಾರ್ಕೆಟ್‌ನಲ್ಲಿ ಭಾರೀ ಅಗ್ನಿದುರಂತ: ಹಲವು ಅಂಗಡಿ ಮುಂಗಟ್ಟುಗಳು ಬೆಂಕಿಗಾಹುತಿ

Update: 2017-07-10 23:14 IST

ಲಂಡನ್,ಜು.10: ಕಳೆದ ತಿಂಗಳು ಲಂಡನ್‌ನ ವಸತಿ ಟ್ಟಡದಲ್ಲಿ ಸಂಭವಿಸಿದ ಭೀಕರ ಬೆಂಕಿದುರಂತದ ಕರಾಳನೆನಪು ಮಾಸುವ ಮುನ್ನವೇ ನಗರದ ಪ್ರತಿಷ್ಠಿತ ಕ್ಯಾಮ್‌ಡನ್ ಲಾಕ್ ಮಾರ್ಕೆಟ್‌ನಲ್ಲಿ ರವಿವಾರ ಮಧ್ಯರಾತ್ರಿ ಭಾರೀ ಬೆಂಕಿ ಅಕಸ್ಮಿಕ ಸಂಭವಿಸಿದ್ದು ಹಲವಾರು ಅಂಗಡಿ ಮುಂಗಟ್ಟೆಗಳು ಅಗ್ನಿಗಾಹುತಿಯಾಗಿವೆ.

 ರವಿವಾರ ಮಧ್ಯರಾತ್ರಿ ಮಾರುಕಟ್ಟೆಯ ಮಳಿಗೆಯಲ್ಲಿ ಬೆಂಕಿ ಅಕಸ್ಮಿಕ ಸಂಭವಿಸಿದ ಕುರಿತು ತುರ್ತುಕರೆ ಬಂದ ಕೂಡಲೇ 60ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತೆಂದು ಲಂಡನ್‌ನ ಅಗ್ನಿಶಾಮಕದಳದ ಹೇಳಿಕೆ ತಿಳಿಸಿದೆ.

 ಬೆಂಕಿಯ ಕೆನ್ನಾಲಿಗೆಗಳು ಮಾರುಕಟ್ಟೆಯ ಕಟ್ಟಡದುದ್ದಕೂ ಚಾಚಿ ಹಬ್ಬಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿವೆ. ಈ ಮಧ್ಯೆ ಅಗ್ನಿಅನಾಹುತ ಸಂಭವಿಸಿದ ಪ್ರದೇಶಕ್ಕೆ ತೆರಳದಂತೆ ಅಗ್ನಿಶಾಮಕದಳವು ಟ್ವೀಟರ್ ಮೂಲಕ ಲಂಡನ್ ಜನತೆಗೆ ಮನವಿ ಮಾಡಿದೆ.

 ಲಂಡನ್‌ನಬೃಹತ್ ಮಾರುಕಟ್ಟೆಗಳಲ್ಲೊಂದಾದ ಕ್ಯಾಮ್‌ಡಾನ್ ಲಾಕ್ ಮಾರ್ಕೆಟ್‌ನಲ್ಲಿ 1 ಸಾವಿರ ಅಂಗಡಿ, ಮುಂಗಟ್ಟೆಗಳಿದ್ದು, ಇದೊಂದು ಹಲವಾರು ಮಂದಿಯ ಸಾಮಾಜಿಕ ಜೀವನದ ಕೇಂದ್ರಬಿಂದುವಾಗಿದೆ.

ಆದರೆ ಅಗ್ನಿಅನಾಹುತದಲ್ಲಿ ಈನಕ ಯಾರಾದರೂ ಸಾವುನೋವುಗಳಿಗೆ ತುತ್ತಾಗಿರು ವ ಸಾಧ್ಯತೆಯಿಲ್ಲವೆಂದು ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News