×
Ad

ಮಲಬಾರ್ ಕವಾಯಿತು ಆರಂಭ

Update: 2017-07-11 20:14 IST

ಹೊಸದಿಲ್ಲಿ, ಜು. 10: ಸಮುದ್ರದಲ್ಲಿ ಸಬ್‌ಮೆರಿನ್‌ಗಳನ್ನು ಎದುರಿಸುವ ಬಗ್ಗೆ ವಿಶೇಷ ಗಮನಹರಿಸಿ ಭಾರತ, ಅಮೆರಿಕ ಹಾಗೂ ಜಪಾನ್ 8 ದಿನಗಳ ಜಂಟಿ ನೌಕಾ ಸಮರಾಭ್ಯಾಸ ಮಲಬಾರ್‌ನ್ನು ಇಂದು ಬಂಗಾಳ ಕೊಲ್ಲಿಯಲ್ಲಿ ಆರಂಭಿಸಿತು.

ಭಾರತ ಹಾಗೂ ಅಮೆರಿಕದ ನಡುವಿನ ಸಮರಾಭ್ಯಾಸ 1992ರಲ್ಲಿ ಆರಂಭವಾಯಿತು. ಜಪಾನ್ ಕಡಲತೀರ ರಕ್ಷಣಾ ಪಡೆ ಭಾಗವಹಿಸುವುದರೊಂದಿಗೆ ಈ ಸಮರಾಭ್ಯಾಸ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು.

ಇದು 21ನೇ ಆವೃತ್ತಿಯ ಸಮರಾಭ್ಯಾಸ. ಮೂರು ದೇಶಗಳ ನೌಕಾ ಪಡೆಗಳ ನಡುವೆ ಅಂತರ ಕಾರ್ಯಾಚರಣೆಯನ್ನು ವೃದ್ಧಿಸುವುದು ಹಾಗೂ ಕಡಲತೀರದ ಭದ್ರತಾ ಕಾರ್ಯಾಚರಣೆಯಲ್ಲಿ ಸರಿಸಮಾನ ತಿಳಿವಳಿಕೆ, ಪ್ರಕ್ರಿಯೆ ಅಭಿವೃದ್ಧಿಪಡಿಸುವುದು ಈ ಸಮರಾಭ್ಯಾಸದ ಉದ್ದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News