ಅನುಷ್ಕಾ, ಕತ್ರಿನಾರ ಪೈಕಿ 'ಸಾಹೋ'ಗೆ ಯಾರು ನಾಯಕಿ?

Update: 2017-07-12 05:13 GMT

'ಬಾಹುಬಲಿ' ಸಿನಿಮಾ ನಂತರ ಟಾಲಿವುಡ್ ಸ್ಟಾರ್ಸ್ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಸದಾ ಒಂದಿಲ್ಲೊಂದು ವಿಚಾರಗಳಿಂದಾಗಿ ಸುದ್ದಿಯಲ್ಲಿರುತ್ತಾರೆ' ಇದೀಗ 'ಸಾಹೋ' ಸಿನಿಮಾ ವಿಚಾರದಿಂದಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. 

'ಬಾಹುಬಲಿ-2' ಚಿತ್ರದ ನಂತರ ಪ್ರಭಾಸ್ ಹಾಗೂ ಅನುಷ್ಕಾ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ. ಅದರಲ್ಲೂ 'ಸಾಹೋ'ದಲ್ಲಿ ಇವರಿಬ್ಬರು ತೆರೆಯ ಮೇಲೆ ಸಾಂಗತ್ಯ ಪ್ರದರ್ಶಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಅದು ಸುಳ್ಳೆಂದು ಹೇಳಲಾಗುತ್ತಿದೆ. 

'ಸಾಹೋ' ಚಿತ್ರದಿಂದ ಅನುಷ್ಕಾ ಶೆಟ್ಟಿಯವರನ್ನು ಹೊರಗಿಡಲಾಗಿದೆ ಎಂಬ ಸುದ್ದಿ ಟಾಲಿವುಡ್ ತುಂಬೆಲ್ಲಾ ಹರಿದಾಡುತ್ತಿದೆ. ಅನುಷ್ಕಾ ಶೆಟ್ಟಿ ಅವರ ತೂಕದ ವಿಷಯವೇ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗುತ್ತಿದೆ. 

'ಸಾಹೋ' ಸಿನಿಮಾದಲ್ಲಿ ನಾಯಕಿ ಬೋಲ್ಡ್ ಆಗಿ ಕಾಣಬೇಕಿದೆ. ಆದರೆ ಅನುಷ್ಕಾ ಸ್ವಲ್ಪ ಹೆಚ್ಚಿನ ತೂಕ ಹೊಂದಿದ್ದಾರೆ. ಹಾಗಾಗಿ ಚಿತ್ರತಂಡ ಅವರನ್ನು ದೂರ ಇಟ್ಟಿದೆ ಎಂದು ಹೇಳಲಾಗುತ್ತಿದೆ. 

'ಬಾಹುಬಲಿ' ಚಿತ್ರದ ದೇವಸೇನಾ ಪಾತ್ರಕ್ಕಾಗಿ ಅನುಷ್ಕಾ ಶೆಟ್ಟಿ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಇದೀಗ ಅವರ ಈ ತೂಕದ ವಿಷಯ 'ಸಾಹೋ' ಚಿತ್ರಕ್ಕಷ್ಟೇ ಸರಿ ಹೊಂದುತ್ತಿಲ್ಲ ಎಂಬುದು ಚಿತ್ರತಂಡದ ಅನಿಸಿಕೆ.  ಸದ್ಯಕ್ಕೆ ಕತ್ರಿನಾ ಕೈಫ್ ಅವರ ಹೆಸರು 'ಸಾಹೋ' ಚಿತ್ರದ ನಾಯಕಿ ಪಾತ್ರಕ್ಕೆ ಕೇಳಿಬರುತ್ತಿದ್ದು, ಶೀಘ್ರವೇ ಸ್ಪಷ್ಟ ತೀರ್ಮಾನವನ್ನು ಪ್ರಕಟಿಸುವುದಾಗಿ ಚಿತ್ರತಂಡ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News