ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ: ಇಬ್ಬರು ಸೈನಿಕರು ಹುತಾತ್ಮ
Update: 2017-07-12 17:35 IST
ಹೊಸದಿಲ್ಲಿ, ಜು.12: ಪಾಕ್ ಸೇನೆ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರದ ಕೇರನ್ ಭಾಗದಲ್ಲಿ ಘಟನೆ ನಡೆದಿದೆ.
ಕಾಶ್ಮೀರದ ಬಡಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆ ಮೂವರು ಹಿಝ್ಬುಲ್ ಮುಜಾಹಿದೀನ್ ಉಗ್ರರನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಬುಧವಾರ ಪಾಕ್ ಸೇನೆ ಪೂಂಚ್ ಜಿಲ್ಲೆಯಲ್ಲಿ ಕದನವಿರಾಮ ಉಲ್ಲಂಘನೆ ನಡೆಸಿದೆ. ಜೂನ್ ತಿಂಗಳಲ್ಲಿ ಪಾಕ್ ಸೇನೆಯಿಂದ 23 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದ್ದು, ಮೂವರು ಸೈನಿಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.