×
Ad

ಕೊಡೈಕನಾಲ್‌ನಲ್ಲಿ ಬ್ರಿಟಿಷ್ ಸ್ನೇಹಿತನ ವರಿಸಲಿರುವ ಇರೋಮ್ ಶರ್ಮಿಳಾ

Update: 2017-07-13 19:23 IST

ಕೊಡೈಕನಾಲ್(ತ.ನಾ),ಜು.13: ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯ್ದೆಯ ವಿರುದ್ಧ 16 ವರ್ಷಗಳ ಸುದೀರ್ಘ ಉಪವಾಸ ಮುಷ್ಕರ ನಡೆಸಿದ್ದ ‘ಉಕ್ಕಿನ ಮಹಿಳೆ ’ ಇರೋಮ್ ಶರ್ಮಿಳಾ ಅವರು ವೈವಾಹಿಕ ಬಂಧನಕ್ಕೊಳಗಾಗಲು ನಿರ್ಧರಿಸಿ ದ್ದಾರೆ.

ಬುಧವಾರ ಅವರು ತನ್ನ ದೀರ್ಘಕಾಲದ ಬ್ರಿಟಿಷ್ ಸ್ನೇಹಿತ ಡೆಸ್ಮಂಡ್ ಕುಟಿನ್ಹೊ ಜೊತೆ ಮದುವೆಗಾಗಿ ಇಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಶರ್ಮಿಳಾ ಹಿಂದು ವಿವಾಹ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದು, ಇದು ಅಂತರ್ ಧರ್ಮೀಯ ವಿವಾಹವಾಗಿರುವುದರಿಂದ ವಿಶೇಷ ವಿವಾಹ ಕಾಯ್ದೆಯಡಿ ಅರ್ಜಿ ಸಲ್ಲಿಸು ವಂತೆ ಉಪ ನೋಂದಣಾಧಿಕಾರಿಗಳು ಅವರಿಗೆ ಸೂಚಿಸಿದರು. 30 ದಿನಗಳ ನೋಟಿಸ್ ಅವಧಿ ಮುಗಿದ ಬಳಿಕ ಈ ಮದುವೆ ನೆರವೇರಲಿದೆ.

ಶರ್ಮಿಳಾ ಕಳೆದ ಕೆಲವು ತಿಂಗಳುಗಳಿಂದ ಕುಟಿನ್ಹೊ ಜೊತೆ ಕೊಡೈಕನಾಲ್‌ನಲ್ಲಿ ವಾಸವಿದ್ದಾರೆ. ತಾನು ಶಾಂತಿಯನ್ನು ಅರಸಿಕೊಂಡು ಇಲ್ಲಿಗೆ ಬಂದಿದ್ದು, ಈ ಸ್ಥಳವು ತನಗೆ ಬಹುವಾಗಿ ಹಿಡಿಸಿದೆ ಎಂದು ಶರ್ಮಿಳಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News