ದಿಲೀಪ್ ಬಂಧನದಿಂದ “ಆಘಾತ”: ದೌರ್ಜನ್ಯಕ್ಕೊಳಗಾದ ನಟಿ

Update: 2017-07-13 16:31 GMT

ತಿರುವನಂತಪುರಂ, ಜು.13: ವೈಯಕ್ತಿಕ ದ್ವೇಷದಿಂದ ಪ್ರಕರಣದಲ್ಲಿ ತಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಮಲಯಾಳಂ ನಟ ದಿಲೀಪ್ ಬಂಧನದಿಂದ ಆಘಾತವಾಗಿದೆ ಎಂದು ಚಲಿಸುತ್ತಿದ್ದ ಕಾರಿನಲ್ಲಿ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳಕ್ಕೊಳಗಾದ ನಟಿ ಪ್ರತಿಕ್ರಿಯಿಸಿದ್ದಾರೆ.

ನಾನು ದಿಲೀಪ್ ವಿರುದ್ಧ ಆರೋಪ ಮಾಡಿಲ್ಲ. ವೈಯಕ್ತಿಕ ದ್ವೇಷದಿಂದ ಅಥವಾ ಇನ್ನಿತರ ಕಾರಣಗಳಿಂದ ನಾನು ಯಾರನ್ನೂ ಆರೋಪಿ ಎಂದು ಹೇಳಿಲ್ಲ. ನಮ್ಮ ನಡುವೆ ವೈಮನಸ್ಸು ಇದ್ದದ್ದು ಸತ್ಯ ಎಂದವರು ಹೇಳಿದ್ದಾರೆ.

ಹಣಕಾಸಿನ ವ್ಯವಹಾರದಲ್ಲಿ ದಿಲೀಪ್ ಹಾಗೂ ನಟಿಯ ನಡುವೆ ಅಸಮಾಧಾನವಿತ್ತು ಎಂಬ ವರದಿಯನ್ನು ನಿರಾಕರಿಸಿದ ಅವರು, ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಎಂದು ಅವರು ಹೇಳುವುದಾದಲ್ಲಿ ಸತ್ಯ ಹೊರಬರಲಿದೆ. ಅವರು ತಪ್ಪು ಮಾಡಿದ್ದರೂ ಅಮಾಯಕನಾಗಿದ್ದರೂ ಸತ್ಯ ಹೊರಬರುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News