ಗುಜರಾತ್ ಮತ್ತೆ ಉದ್ವಿಗ್ನ
Update: 2017-07-14 21:34 IST
ಅಹ್ಮದಾಬಾದ್, ಜು. 14: ಗುಂಪು ಘರ್ಷಣೆಯಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟು ಐವರು ಗಾಯಗೊಂಡ ಒಂದು ದಿನದ ಬಳಿಗ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ವ್ಯಾಟ್ಸಾಪ್, ಫೇಸ್‌ಬುಕ್‌ನಂತಹ ವಿವಿಧ ಸಾಮಾಜಿಕ ಮಾದ್ಯಮಗಳಲ್ಲಿ ವದಂತಿಗಳು ಹಬ್ಬುವುದನ್ನು ತಡೆಯವ ಉದ್ದೇಶದಿಂದ ಶುಕ್ರವಾರದಿಂದ ಸುರೇಂದ್ರನಗರ ಹಾಗೂ ಸಮೀಪದ ಮೊರ್ಬಿ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಸರಕಾರದ ಪ್ರಕಟನೆ ತಿಳಿಸಿದೆ.