×
Ad

5.56 ಲಕ್ಷ ಜನರ ಮೇಲೆ ಐಟಿ ಕಣ್ಣು

Update: 2017-07-14 22:01 IST

ಹೊಸದಿಲ್ಲಿ, ಜು. 14: ನೋಟು ಅಪವೌಲ್ಯೀಕರಣದ ಸಂದರ್ಭ ನಗದು ಜಮೆ ಹಾಗೂ ತೆರಿಗೆ ವಿವರಗಳು ಹೊಂದಾಣಿಕೆ ಆಗದ 5.56 ಲಕ್ಷ ಜನರನ್ನು ಆದಾಯ ತೆರಿಗೆ ಇಲಾಖೆ ಗುರುತಿಸಿದೆ.

 ನಗದು ಅಪವೌಲ್ಯೀಕರಣದ ಬಳಿಕ ಕಪ್ಪು ಹಣ ಉತ್ಪತ್ತಿಯಾಗುವುದನ್ನು ಪತ್ತೆಹಚ್ಚುವ ಉದ್ದೇಶದೊಂದಿಗೆ ಎರಡನೇ ಹಂತದ ಆಪರೇಷನ್ ಕ್ಲೀನ್ ಮನಿಯನ್ನು ಎಪ್ರಿಲ್‌ನಲ್ಲಿ ಆರಂಭಿಸಲಾಗಿತ್ತು. ಇದರ ಒಂದನೇ ಹಂತ ಮುಗಿದಿದ್ದು, ಹೆಚ್ಚುವರಿ ಪ್ರಕರಣಗಳನ್ನು ಗುರುತಿಸಲು ಬ್ಯಾಂಕ್‌ನಿಂದ ಹಣಕಾಸು ವರ್ಗಾವಣೆ ವಿವರಗಳ ಮಾಹಿತಿ ಪಡೆಯಲಾಗಿತ್ತು.

ಇವರು ನಗದು ಅಪವೌಲ್ಯೀಕರಣದ ಸಂದರ್ಭ ನಗದು ಜಮೆ ಹಾಗೂ ಆದಾಯ ವಿವರಗಳ ನಡುವೆ ಹೊಂದಾಣಿಕ ಇಲ್ಲದ ವ್ಯಕ್ತಿಗಳು ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.

  ಗುರುತಿಸಲಾದ ಎಲ್ಲ ವ್ಯಕ್ತಿಗಳು ಇಮೇಲ್ ಹಾಗೂ ಎಸ್‌ಎಂಎಸ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿದ್ದಾರೆ. ಮೊದಲನೇ ಹಂತದ ಕಾರ್ಯಾಚರಣೆ ಸಂದರ್ಭ ಇ-ಪರಿಶೀಲನೆಯಲ್ಲಿ ತಮ್ಮ ಬ್ಯಾಂಕ್ ಖಾತೆ ವಿವರ ನೀಡದ 1.04 ಲಕ್ಷ ಜನರನ್ನು ಗುರುತಿಸಲಾಗಿದೆ .

ಮೊದಲ ಹಂತದ ಕ್ಲೀನ್ ಮನಿಯನ್ನು ಜನವರಿಯಲ್ಲಿ ಆರಂಭಿಸಲಾಗಿತ್ತು. ಇದರಲ್ಲಿ ಈ ಪರಿಶೀಲನೆಗೆ 31,17,92ಯನ್ನು ಗುರುತಿಸಲಾಗಿತ್ತು. ಇವರಲ್ಲಿ 9.72 ಲಕ್ಷ ಜನ ಆನ್‌ಲೈನ್ ಮೂಲಕ ಪ್ರತಿಕ್ರಿಯೆ ಸಲ್ಲಿಸಿದ್ದರು.

1,300 ಅಧಿಕ ರಿಸ್ಕ್ ಇರುವ ವ್ಯಕ್ತಿಗಳು ಸೇರಿದಂತೆ 60 ಸಾವಿರ ಜನರ ಪರಿಶೀಲನೆ ನಡೆಸಲಾಗುವುದು ಎಂದು ಆಪರೇಷನ್ ಕ್ಲೀನ್ ಮನಿಯ ಎರಡನೇ ಹಂತದ ಆರಂಭದಲ್ಲಿ ಆದಾಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News