ವರ್ಮಾ ಸಾರಥ್ಯದಲ್ಲಿ ಎನ್‌ಟಿಆರ್ ಬಯೋಪಿಕ್

Update: 2017-07-15 13:16 GMT

ತೆಲುಗು ಚಿತ್ರರಂಗದಲ್ಲಿ ಪೌರಾಣಿಕ ಪಾತ್ರ ಗಳಿಂದ ಚಿತ್ರಪ್ರೇಮಿಗಳ ಮನಸೂರೆ ಗೊಂಡ ಆಂಧ್ರದ ಮಾಜಿ ಮುಖ್ಯಮಂತ್ರಿ ದಿ. ಎನ್.ಟಿ.ರಾಮರಾವ್ ಅವರ ಬದುಕು ಇದೀಗ ಬೆಳ್ಳೆತೆರೆಯಲ್ಲಿ ಮೂಡಿಬರಲಿದೆ. ಬಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರು ಎನ್‌ಟಿಆರ್ ಕುರಿತ ಬಯೋಪಿಕ್ ಚಿತ್ರ ವನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಈ ವಿಷಯ ವನ್ನು ಸ್ವತಃ ವರ್ಮಾ ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ದೃಢಪಡಿಸಿದ್ದಾರೆ.

ಈ ಸಿನೆಮಾದಲ್ಲಿ ಎನ್‌ಟಿಆರ್ ಪಾತ್ರವನ್ನು ಅವರ ಪುತ್ರ ಹಾಗೂ ಜನಪ್ರಿಯ ನಟನೂ ಆದ ಬಾಲಕೃಷ್ಣ ನಿರ್ವ ಹಿಸಲಿದ್ದಾರಂತೆ. ಆದಾಗ್ಯೂ ಬಾಲಕೃಷ್ಣ ಈ ತನಕ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎನ್‌ಟಿಆರ್ ಜೀವನದ ಮಹತ್ವದ ಕ್ಷಣಗಳನ್ನು ಚಿತ್ರದಲ್ಲಿ ಅನಾವರಣಗೊಳಿಸುವು ದಾಗಿ ವರ್ಮಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆಎನ್‌ಟಿಆರ್ ಅವರ ರಾಜಕೀಯ ಬದುಕಿನ ವಿವಾ ದಗಳು ಹಾಗೂ ಅದಕ್ಕೆ ಸಂಬಂಧಿಸಿ ವ್ಯಕ್ತಿಗಳು ಕೂಡಾ ಚಿತ್ರದಲ್ಲಿ ಕಥಾಪಾತ್ರಗಳಾಗಿ ಮೂಡಿಬ ರಲಿದ್ದಾರೆ ಎಂದವರು ಹೇಳಿದ್ದಾರೆ. ಆ ಮೂಲಕ ಚಿತ್ರವು ವಿವಾದದ ಕಿಡಿ ಹೊತ್ತಿ ಸುವ ಎಲ್ಲಾ ಸಾಧ್ಯತೆಗಳಿರುವ ಬಗ್ಗೆ ಸುಳಿವು ಕೂಡಾ ನೀಡಿದ್ದಾರೆ.

ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಾತ್ರವೂ ಚಿತ್ರದಲ್ಲಿರುವು ದರಿಂದ ಆಂಧ್ರದ ಆಳುವ ಪಕ್ಷದ ಕೆಂಗಣ್ಣಿಗೂ ಈ ಚಿತ್ರ ಗುರಿ ಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News