ರಜನಿ ಫ್ಯಾನ್ಸ್ ಚಿತ್ರ

Update: 2017-07-15 17:49 GMT

ರಜನಿಕಾಂತ್ ಚಿತ್ರ ನಿರ್ಮಾಣವಾಗಲಿದೆಯೆಂದರೆ ಭಾರತೀಯ ಚಿತ್ರರಂಗದಲ್ಲಿ ಅದೊಂದು ಬಿಸಿಬಿಸಿ ಚರ್ಚೆಯ ವಿಷಯವಾಗಿ ಬಿಡುತ್ತದೆ. ಆದರೆ ರಜನಿಯ ಅಭಿಮಾನಿಗಳ ಕುರಿತಾಗಿಯೇ ಚಿತ್ರ ಮಾಡಿದರೆ ಹೇಗೆ?. ತಮಿಳಿನ ಖ್ಯಾತ ಹಾಸ್ಯ ನಟ, ನಿರ್ದೇಶಕ ಸೆಲ್ವ ಇಂತಹದ್ದೊಂದು ಸಾಹಸಕ್ಕಿಳಿದಿದ್ದಾರೆ.

‘12-12-1950’ ಎಂದು ಹೆಸ ರಿಡಲಾದ ಈ ಚಿತ್ರವು ಐವರು ಪಕ್ಕಾ ರಜನಿ ಫ್ಯಾನ್ಸ್‌ಗಳ ಕುರಿತಾದ ಕಥೆಯ ನ್ನು ಹೊಂದಿದೆಯಂತೆ. ರಜನಿ ಜನಿಸಿ ದ ದಿನವನ್ನೇ ಚಿತ್ರದ ಟೈಟಲ್ ಆಗಿ ಇಟ್ಟುಕೊಳ್ಳುವ ಮೂಲಕ ಸೆಲ್ವ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್‌ಗೆ ದಕ್ಷಿಣ ಭಾರತ ದಲ್ಲಿ ಮಾತ್ರವಲ್ಲ ಉತ್ತರ ಭಾರತ, ಜಪಾನ್, ಸಿಂಗಾಪುರ ಹೀಗೆ ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿ ಬಳಗವಿದೆ.

ಇದೊಂದು ಐವರು ರಜನಿ ಅಭಿಮಾನಿಗಳು ಹಾಗೂ ಅವರ ಜೀವನ ಪಯಣದ ಕಥೆ. ರಜನಿಯ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಈ ಚಿತ್ರವನ್ನು ನಿರ್ಮಿಸಲು ಹೊರಟಿಲ್ಲವೆಂದು ಸ್ಪಷ್ಟಪಡಿಸಿರುವ ವೇಲು, ಕಥೆಗೆ ಸೂಕ್ತವೆಂಬ ಕಾರಣಕ್ಕಾಗಿಯೇ ಈ ಟೈಟಲ್ ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ಮನಸ್ಸು ಮಾಡಿದಲ್ಲಿ ನಟನೊಬ್ಬನ ಜನಪ್ರಿಯತೆಯನ್ನು ಹೊಸದಿಕ್ಕಿನೆಡೆಗೆ ಕೊಂಡೊಯ್ಯಬಲ್ಲರೆಂಬುದನ್ನು ಈ ಚಿತ್ರದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ಮೂಡಿಸಲಿದ್ದೇವೆ ಎನ್ನುತ್ತಾರವರು.

ಚಿತ್ರದಲ್ಲಿ ಸೆಲ್ವ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ರಮೇಶ್ ತಿಲಕ್, ಅಜಯ್, ಆಧವನ್ ಹಾಗೂ ಪ್ರಶಾಂತ್ ಇತರ ಪಾತ್ರ ಗಳಲ್ಲಿದ್ದಾರೆ. ಒಟ್ಟಿನಲ್ಲಿ 12-12-1950 ರಜನಿ ಫ್ಯಾನ್ಸ್‌ಗಳಿಗೆ ರಸದೌತಣ ನೀಡಲಿದೆಯಂತೆ. ಅಂದಹಾಗೆ ಸೆಲ್ವ ರಜನಿಯ ‘ಕಬಾಲಿ’ ಚಿತ್ರದಲ್ಲಿ ಕಿರುಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News