ದೇಶದಲ್ಲಿ ಕೋಮುಧ್ರುವೀಕರಣಕ್ಕೆ ಅವಕಾಶ ನೀಡುವುದಿಲ್ಲ: ಕೆ.ಸಿ.ವೇಣುಗೋಪಾಲ್
Update: 2017-07-17 14:57 IST
ಕರುನಾಗಪಳ್ಳಿ,ಜು.17: ಭಾರತದ ಪರಂಪರೆ, ಮಹತ್ತರವಾದ ಸಂವಿಧಾನ, ಜಾತ್ಯತೀತತೆಯನ್ನು ಸಂರಕ್ಷಿಸಲು ಪ್ರತಿಯೊಬ್ಬ ಭಾರತೀಯನೂ ಒಗ್ಗೂಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಗೋಮಾಂಸದ ವಿಷಯದಲ್ಲಿ ಎರಡು ಧರ್ಮೀಯರನ್ನು ಪರಸ್ಪರ ಹೊಡೆದಾಡಿಸಿ ಕೋಮುಧ್ರುವೀಕರಣಕ್ಕೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ಫ್ಯಾಶಿಸಂ ರೌದ್ರಾವತಾರ ತಾಳಿ ಭಾರತ ಎನ್ನುವ ಮಹಾನ್ ದೇಶವನ್ನು ಇಲ್ಲದಾಗಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರುನಾಗಪಳ್ಳಿ ತಾಲೂಕಿನಮೊಹಲ್ಲಾಗಳ ಮೂವತ್ತಕ್ಕೂ ಹೆಚ್ಚು ಸಂಘಟನೆಗಳ ಸಹಕಾರದಲ್ಲಿ ರೂಪೀಕರಿಸಲಾದ ಮುಸ್ಲಿಂ ಕೋಆರ್ಡಿನೇಶನ್ ಕಮಿಟಿಯ ನೇತೃತ್ವದಲ್ಲಿ ಮುಸ್ಲಿಂ-ದಲಿತ್ ಅಲ್ಪಸಂಖ್ಯಾತರ ದಾಳಿ ವಿರುದ್ಧ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.