ದಿಲೀಪ್‍ರ ಮನೆಗೆ ಕಾವಲು ನಿಂತು ಕುಸಿದುಬಿದ್ದ ಎಸ್ಸೈ

Update: 2017-07-17 10:14 GMT

ಆಲುವ,ಜು 17: ನಟ ದಿಲೀಪ್‍ರ ಆಲುವ ಕೊಟ್ಟಾರಕ್ಕಡವ್‍ನ ಮನೆಯ ಪರಿಸರದಲ್ಲಿ ಕಾವಲು ನಿಂತಿದ್ದ ಎಸ್ಸೈ ಕುಸಿದು ಬಿದ್ದಿದ್ದಾರೆ. ಚೆಂಙಮಾಡ್ ಪನಯಕ್ಕಡವ್ ಎಂಬಲ್ಲಿನ ಕುಂಞಿ ಮುಹಮ್ಮದ್ ಕುಸಿದುಬಿದ್ದ ಪೊಲೀಸಧಿಕಾರಿಯಾಗಿದ್ದು, ರವಿವಾರ ಬೆಳಗೆ ಘಟನೆ ನಡೆದಿದೆ.

ಮೊದಲು ಅಲುವ ನಜಾತ್ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಜಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಲೀಪ್‍ರ ಮನೆಯಲ್ಲಿ ಕುಟುಂಬದ ಯಾರೂ ಕೂಡಾ ವಾಸಿಸುತ್ತಿಲ್ಲ. ಆದರೂ ಅಲ್ಲಿ ಮೂವರು ಪೊಲೀಸರನ್ನು ಕಾವಲು ನಿಲ್ಲಿಸಲಾಗಿದೆ. ಇಲ್ಲಿಗೆ ಯಾರಾದರೂ ಬರುತ್ತಿದ್ದಾರೆಯೇ ಎಂದು ನಿಗಾವಿರಿಸಲು ಕಾವಲು ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News