ಗೆಲುವಿನತ್ತ "ಎರಡು" ಹೆಜ್ಜೆ

Update: 2017-07-18 04:41 GMT

'ದಂಡುಪಾಳ್ಯ' ಚಿತ್ರದ ಎರಡನೇ ಭಾಗವನ್ನು 2 ಎಂಬ ಹೆಸರಿನಿಂದ ತೆರೆಗೆ ತಂದಿರುವ ಚಿತ್ರತಂಡ ಅದರ ಯಶಸ್ಸಿನ ಖುಷಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿತು.

"ಎರಡು ಚಿತ್ರಕ್ಕಾಗುವಾಗ 'ದಂಡುಪಾಳ್ಯ' ಚಿತ್ರದಲ್ಲಿಲ್ಲದ ಒಂದಷ್ಟು ಕಲಾವಿದರು ಹೊಸದಾಗಿ ಸೇರಿಕೊಂಡಿದ್ದಾರೆ. ಅವರಲ್ಲಿ ಶ್ರುತಿ, ಸಂಜನಾ, ಅವಿನಾಶ್ ಮೊದಲಾದವರು ಪ್ರಮುಖರಾಗಿದ್ದು ಹೊಸ ಆಕರ್ಷಣೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು ನಟ ಕರಿಸುಬ್ಬು.

ಚಿತ್ರದ ನಿರ್ಮಾಪಕ ವೆಂಕಟ್ ಮಾತನಾಡಿ "ಕಲೆಕ್ಷನ್ ಚೆನ್ನಾಗಿದೆ. ಸಮಸ್ಯೆ, ಕೇಸ್ ಗಳ ಬಳಿಕ ಕಷ್ಟಪಟ್ಟು ಹೊರಗೆ ಬಂದಿದ್ದೇವೆ. ಮಾಧ್ಯಮದವರು ಅರ್ಥಮಾಡಿಕೊಂಡು ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಪ್ರೇಕ್ಷಕರು ಕೂಡ ಜೊತೆಯಾಗಿರುವುದು ಖುಷಿ ತಂದಿದೆ" ಎಂದರು.ಚಿತ್ರದ ನಾಯಕಿ ಪೂಜಾಗಾಂಧಿ,  ಚಿತ್ರದಲ್ಲಿ ಎಲ್ಲಾ ತರಹದ ಎಮೋಶನ್ಸ್ ಇದೆ. ಹಿಂಸೆಯಷ್ಟೇ ಹೈಲೈಟ್ ಮಾಡಿರುವ ಚಿತ್ರವಿದಲ್ಲ ಎಂದರು.

ಬಳಿಕ ಮಾತನಾಡಿದ ಸಂಜನಾ, 'ನಾಟಿಕೋಳಿ' ಎಂಬ ಚಿತ್ರದಲ್ಲೇ ನಾನು ನಿರ್ದೇಶಕ ಶ್ರೀನಿವಾಸ ರಾಜು ಅವರೊಡನೆ ಕೆಲಸ ಮಾಡಬೇಕಿತ್ತು. ಆದರೆ ಅವಕಾಶ ದೊರಕಿದ್ದು ಈಗ. ಸಂಜನಾ ಎಂದಕೂಡಲೇ ಇಂಡಸ್ಟ್ರಿಯಲ್ಲಿ ಗ್ಲಾಮರ್ ಪಾತ್ರವನ್ನಷ್ಟೇ ನೆನಪಿಸಿಕೊಳ್ಳುತ್ತಾರೆ. ಆದರೆ 2 ಚಿತ್ರದಲ್ಲಿ ಗ್ಲಾಮರ್ ಎಂಬುದನ್ನು ದಾಟಿ ಬಂದಿದ್ದೇನೆ. ಇದೊಂದೇ ಸಿನಿಮಾದಲ್ಲಿ ಏಳೆಂಟು ಸಿನಿಮಾಗಳಿಗಾಗುವಷ್ಟು ಕೆಲಸ ಮಾಡಿದ್ದೇವೆ. ಆದರೆ ನನ್ನ ಪಾತ್ರದ ಉದ್ದೇಶವೇನಿತ್ತು ಆ ಇಡೀ ದೃಶ್ಯವೇ ಬಳಕೆಯಾಗಿಲ್ಲ. ಸೆನ್ಸಾರ್ ನವರು ಅದನ್ನು ಕತ್ತರಿಸಿದ್ದಾರೆ ಎಂದರು.

ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ  ಚಿತ್ರವು ಇದೇ ರೀತಿ ಯಶಸ್ವಿಯಾಗಿ ಮುಂದುವರಿಯುವ ಭರವಸೆ ಇರುವುದಾಗಿ ಹೇಳಿದರು. ಇದೇ ವಾರ ಚಿತ್ರವನ್ನು ತೆಲುಗಿನಲ್ಲಿಯೂ ತೆರೆಗೆ ತರಲಿರುವುದಾಗಿ ಅವರು ತಿಳಿಸಿದರು.
ನಿರ್ಮಾಪಕ ವೆಂಕಟ್ ಸೇರಿದಂತೆ ಕಲಾವಿದರಾದ ಡ್ಯಾನಿ ಕುಟ್ಟಪ್ಪ, ಜಯದೇವ ಮೊದಲಾದವರು ಉಪಸ್ಥಿತರಿದ್ದರು.

ಪೂಜಾ ಜೊತೆ 'ಟು' ಬಿಟ್ಟ ಸಂಜನಾ!

'ಎರಡು' ಚಿತ್ರದಲ್ಲಿ ನಟಿಸಿರುವ ಸಂಜನಾ ಗಲ್ರಾನಿ ವೇದಿಕೆಯ ಮೇಲೆ ಪೂಜಾಗಾಂಧಿಯನ್ನು ಕಂಡಾಗೆಲ್ಲ ಗುರ್ರೆಂದಿದ್ದಾರೆ. ಅದಕ್ಕೆ ಕಾರಣ ಇಷ್ಟೇ; ಪೂಜಾ ಹಾಕಿದ ಫೇಸ್ಬುಕ್ ಸ್ಟೇಟಸ್ ಎನ್ನಲಾಗಿದೆ. ಚಿತ್ರದ ಮೊದಲ ಪತ್ರಿಕಾಗೋಷ್ಠಿಗೆ ಸಂಜನಾರನ್ನು ಆಹ್ವಾನಿಸಿರಲಿಲ್ಲ. ಆ ಬಗ್ಗೆ ಆಕೆ ನಿರ್ಮಾಪಕರನ್ನು ಪ್ರಶ್ನಿಸಿದ್ದರಂತೆ. ಇದನ್ನು ತಿಳಿದ ಪೂಜಾಗಾಂಧಿ ಸಂಜನಾ ಇಷ್ಟೊಂದು ಅನ್ಕಂಫರ್ಟೇಬಲ್ ಫೀಲ್ ಆಗಬಾರದು ಎಂದು ತಮ್ಮ ಫೇಸ್ಬುಕ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ನನ್ನ ಬಗ್ಗೆ ಕಮೆಂಟ್ ಮಾಡಲು ಪೂಜಾ ಯಾರು ಎನ್ನುವುದು ಸಂಜನಾ ಕೋಪಕ್ಕೆ ಕಾರಣವಾಗಿತ್ತು. ಪೂಜಾ ವೇದಿಕೆಯ ಮೇಲೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸಲಿಲ್ಲ. ನಿರ್ಮಾಪಕರು ಮತ್ತು ನಿರ್ದೇಶಕರು ಈ ಘಟನೆಯನ್ನು ಇಲ್ಲಿಗೇ ಮುಗಿಸುವಂತೆ ಮಾಧ್ಯಮಗಳಲ್ಲಿ ವಿನಂತಿಸುತ್ತಾ, ಸಕ್ಸಸ್ ಮೀಟ್ ಗಿಂತ ದೊಡ್ಡ ವಿಷಯ ಇದಾಗುವುದು ಬೇಡ ಎಂದರು. ನಿರ್ಮಾಪಕರ ಕೋರಿಕೆಯೂ ಅದೇ ಆಗಿತ್ತು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News