ನೂತನ ಭಾರತ-ಬ್ರಿಟನ್ ಗಡಿಪಾರು ಒಪ್ಪಂದಕ್ಕೆ ಸಿದ್ಧತೆ
Update: 2017-07-18 21:59 IST
ಲಂಡನ್, ಜು. 18: ಅಕ್ರಮ ವಲಸಿಗರನ್ನು ಹಿಂದಕ್ಕೆ ಕಳುಹಿಸುವುದು, ಗಡಿಪಾರು ಮತ್ತು ವೀಸಾಗಳಿಗೆ ಸಂಬಂಧಿಸಿದ ಸಮಗ್ರ ಒಪ್ಪಂದವೊಂದಕ್ಕೆ ಭಾರತ ಮತ್ತು ಬ್ರಿಟನ್‌ಗಳು ಈ ವರ್ಷದ ಕೊನೆಯ ವೇಳೆಗೆ ಸಹಿ ಹಾಕಲಿವೆ.
ಬ್ರಿಟನ್‌ಗೆ ಒಂದು ವಾರದ ಭೇಟಿ ನೀಡಿರುವ ಭಾರತದ ಗೃಹ ಕಾರ್ಯದರ್ಶಿ ರಾಜೀವ್ ಮೆಹ್ರೀಶಿ, ಬ್ರಿಟಿಶ್ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ ಈ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.