1000 ಎನ್‌ಜಿಒ ಖಾತೆ ರದ್ದುಪಡಿಸಿದ ಮೋದಿ ಸರ್ಕಾರ

Update: 2017-07-19 03:52 GMT

ಹೊಸದಿಲ್ಲಿ, ಜು. 19: ವಿದೇಶಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ 1000 ಸ್ವಯಂಸೇವಾ ಸಂಸ್ಥೆಗಳು ತಮ್ಮ ವಿದೇಶಿ ದೇಣಿಗೆ ಖಾತೆಯಲ್ಲಿ ವಹಿವಾಟು ನಡೆಸದಂತೆ ಕೇಂದ್ರ ಸರ್ಕಾರ ನಿಷೇಧಿಸಿದೆ. ಜತೆಗೆ 2000 ಎನ್‌ಜಿಒಗಳಿಗೆ ಪ್ರಸ್ತುತ ಇರುವ ಎಫ್‌ಸಿಆರ್‌ಎ ಸಂಪರ್ಕಿತ ಬ್ಯಾಂಕ್ ಖಾತೆಗಳನ್ನು ದೃಢೀಕರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

"ಒಂದು ಸಾವಿರಕ್ಕೂ ಅಧಿಕ ಎನ್‌ಜಿಒಗಳು ಎಫ್‌ಸಿಆರ್‌ಎ- 2010 ಕಾಯ್ದೆ ಉಲ್ಲಂಘಿಸಿರುವುದು ಮತ್ತು ವಿದೇಶಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಗಳು ತಮ್ಮ ವಿದೇಶಿ ದೇಣಿಗೆ ಖಾತೆಯಲ್ಲಿ ವಹಿವಾಟು ನಡೆಸದಂತೆ ತಡೆ ವಿಧಿಸಲಾಗಿದೆ" ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2000 ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ಅನುಗುಣವಾಗಿ ಹೊಂದಿರುವ ಬ್ಯಾಂಕ್ ಖಾತೆಗಳನ್ನು ದೃಢೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಎಲ್ಲ ಎನ್‌ಜಿಒಗಲ ಪಟ್ಟಿ www.fcraonline.nic.in ನಲ್ಲಿ ಲಭ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಫ್‌ಸಿಆರ್‌ಎ ಅನ್ವಯ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ವಿದೇಶಿ ಅನುದಾನವನ್ನು ಪಡೆದಿದ್ದರೆ, ಅಂಥ ಖಾತೆದಾರರ ಸ್ವೀಕೃತಿ ಮತ್ತು ವೆಚ್ಚದ ಬಗ್ಗೆ ವಿವರಗಳನ್ನು ಬ್ಯಾಂಕ್‌ಗಳು ನೀಡುವುದು ಕಡ್ಡಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News