×
Ad

ಗೃಹಿಣಿಯ ಆತ್ಮಹತ್ಯೆ ಪ್ರಯತ್ನ; ಶಾಸಕರ ವಿರುದ್ಧ ದೂರು

Update: 2017-07-20 15:16 IST

ಬಾಲರಾಮಪುರಂ(ಕೇರಳ) ಜು. 20: ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯಲ್ಲಿ  ಕೋವಳಂ ಶಾಸಕ ಎ.ಎಂ. ವಿಲ್ಸನ್ ವಿರುದ್ಧ ಬಾಲರಾಮಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸುವ ಹೊಣೆಯನ್ನು  ರಾಜ್ಯ ಪೊಲೀಸ್ ಮುಖ್ಯಸ್ಥರು  ಕೊಲ್ಲಂ ಸಿಟಿ ಪೊಲೀಸ್ ಕಮೀಶನರ್  ಅಜಿತಾಬೇಗಂರಿಗೆ ಒಪ್ಪಿಸಿದ್ದಾರೆ.  ಬುಧವಾರ ಬೆಳಗ್ಗೆ ನಿದ್ರೆ ಮಾತ್ರೆ ಸೇವಿಸಿ ಅಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಗೃಹಿಣಿಯನ್ನು ನೆಯ್ಯಾಟಿನ್‍ಕರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮಹಿಳೆಯ ಪತಿ ಶಾಸಕರ ವಿರುದ್ಧ ನೆಯ್ಯಾಟಿನ್‍ಕರ ಸರ್ಕಲ್ ಇನ್ಸ್‍ಪೆಕ್ಟರ್‍ರಿಗೆ ದೂರು ನೀಡಿದ್ದಾರೆ. ನೆರೆಯವರಾದ ಈಗೃಹಿಣಿಯೊಂದಿಗೆ ಶಾಸಕರು ನಿರಂತರ ನಾಲ್ಕುತಿಂಗಳುಗಳಿಂದ ಪೋನ್‍ನಲ್ಲಿ  ಅಶ್ಲೀಲವಾಗಿ  ಮಾತಾಡಿ ಕಿರುಕುಳ ನೀಡುತ್ತಿದ್ದರು ಎಂದುಶಾಸಕರ ವಿರುದ್ಧ ಮಹಿಳೆಯ ಪತಿ ದೂರು ನೀಡಿದ್ದಾರೆ. ನಂತರ ಹಲವು ಸಲ ಶಾಸಕರಿಗೆ ಎಚ್ಚರಿಕೆ ನೀಡಿದರೂ ಶಾಸಕರು ಈ ಚಾಳಿಯನ್ನು ಮುಂದುವರಿಸಿದ್ದರು. ಇದರಿಂದ ನೊಂದು ಮಹಿಳೆ ಆತ್ಮಹತ್ಯೆಗೆ ಶ್ರಮಿಸಿದ್ದಾರೆ ಎಂದು ಮಹಿಳೆಯ ಪತಿ ಬಾಲರಾಮಪುರಂ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News