×
Ad

‘ಎಲ್ಲ ವರ್ಗಗಳನ್ನು ಒಂದಾಗಿ ಕಾಣಿ’: ನೂತನ ರಾಷ್ಟ್ರಪತಿಗೆ ಮಲ್ಲಿಕಾರ್ಜುನ ಖರ್ಗೆ ಮನವಿ

Update: 2017-07-20 19:53 IST

ಬೆಂಗಳೂರು, ಜು.20: ದೇಶದಲ್ಲಿ ಹಲವಾರು ಸಂಘಟನೆಗಳಿಂದ ಭಯದ ವಾತಾವರಣವಿದೆ. ಈ ಸಂದರ್ಭದಲ್ಲಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಎಲ್ಲ ವರ್ಗಗಳನ್ನು ಒಟ್ಟಾಗಿ, ಒಂದಾಗಿ ನೋಡುವ ಕೆಲಸ ಮಾಡಲಿ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಮತ್ತು ಕೋವಿಂದ್ ನಡುವಿನ ಹೋರಾಟವಲ್ಲ. ಸೈದ್ಧಾಂತಿಕ ವಿಚಾರಗಳ ನಡುವಿನ ಹೋರಾಟವೆಂದು ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಮೀರಾಕುವಾರ್ ಮೊದಲೆ ಹೇಳಿದ್ದರು ಎಂದರು.

ರಾಷ್ಟ್ರಪತಿ ಚುನಾವಣೆಯ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ. ತತ್ವ, ಸಿದ್ಧಾಂತಗಳ ನಡುವೆ ನಡೆದ ಈ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಸೋತ ನಂತರ ಈ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸೋಲು ಖಚಿತವೆಂದು ತಿಳಿದು ಚುನಾವಣೆಯಲ್ಲಿ ಸ್ಪರ್ಧಿಸದೆ ದೂರ ಇರುವುದಕ್ಕೆ ಆಗುತ್ತದೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಇರಬೇಕು. ಸೋಲುವ ಭಯದಿಂದ ಎಲ್ಲ ಚುನಾವಣೆಗಳನ್ನು ಬಿಜೆಪಿಗೆ ಬಿಟ್ಟುಕೊಡಲು ಆಗುತ್ತದೆಯೇ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಪ್ರಣವ್ ಮುಖರ್ಜಿ ರೀತಿಯಲ್ಲಿ ಅವರು ಕೆಲಸ ಮಾಡಲಿ ಎಂದು ಮಲ್ಲಿಕಾರ್ಜುನ ಖರ್ಗೆ ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News