ತನ್ನೀರ್... ತನ್ನೀರ್... ಇಂದಿಗೂ ಪ್ರಸ್ತುತ...

Update: 2017-07-21 10:20 GMT

‘‘ಕೂಳಾನಾಲುಂ ಕುಳಿಚ್ಚಿ ಕುಡಿ, ಕಂದೈ ಯಾನಾಲುಂ ಕಸಕ್ಕಿ ಕಟ್ಟ್’’: ಅಂಬಲಿ ಯಾದರೂ ಅದನ್ನು ಸ್ನಾನ ಮಾಡಿದ ನಂತರವೇ ಕುಡಿ, ಬಟ್ಟೆ ಹರಿದುಹೋಗಿದ್ದರೂ, ಅದನ್ನು ಒಗೆದ ಆನಂತ ರವೇ ಧರಿಸು. ತಮಿಳಿನ ಈ ಜನಪ್ರಿಯ ಗಾದೆಯ ಅರ್ಥವನ್ನು ಸುಮಾರು ಹತ್ತು ವರ್ಷಗಳಿಂದ ತನ್ನ ಹಳ್ಳಿಯಲ್ಲಿ ನೀರನ್ನೇ ಕಾಣದಿರುವ ಮಗುವಿಗೆ ನೀವು ಹೇಗೆ ತಾನೇ ವಿವರಿಸಲು ಸಾಧ್ಯ?.

ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ರಾಷ್ಟ್ರೀಯಚಲನಚಿತ್ರ ಪ್ರಶಸ್ತಿ ವಿಜೇತ ಚಿತ್ರ ತನ್ನೀರ್ ತನ್ನೀರ್ (1981)ನಲ್ಲಿ ಆಗಿನ ಹೃದಯ ಸ್ಪರ್ಶಿ ದೃಶ್ಯವೊಂದರಲ್ಲಿ ಈ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡುತ್ತಾರೆ. ಬರಪೀಡಿತ ಅತ್ತಿಪಟ್ಟಿ ಗ್ರಾಮ ದ ಶಾಲಾ ಶಿಕ್ಷಕರೊಬ್ಬರು ಈ ಗಾದೆ ಮಾತನ್ನು ಕಲಿಸಲು ಪ್ರಯತ್ನಿಸುವಾಗ, ಸಣ್ಣ ಬಾಲಕನೊಬ್ಬ ತನ್ನ ಗ್ರಾಮದಲ್ಲಿ ಈ ಗಾದೆಯು ಅಪ್ರಸ್ತುತವಾಗಿರುವ ಬಗ್ಗೆ ಗಮನಸೆಳೆ ಯುತ್ತಾನೆ. ಯಾಕೆಂದರೆ ಅತ್ತಿಪಟ್ಟಿ ಗ್ರಾಮದಲ್ಲಿ ಕಳೆದ ಒಂದು ದಶಕದಿಂದ ಕುಡಿಯಲು ನೀರೇ ಇಲ್ಲ. ಆಗ ಅಧ್ಯಾಪಕನುತಕ್ಷಣವೇ ಇತಿಹಾಸದ ಪಾಠವನ್ನು ಬೋಧಿಸತೊಡಗುತ್ತಾನೆ. ‘‘ನಾನು ಹೇಳುವುದನ್ನು ಪುನರುಚ್ಚರಿಸಿ. ಭಾರತವು ಒಂದು ಸ್ವತಂತ್ರ ರಾಷ್ಟ್ರವಾಗಿದೆ.’’ ಆಗ ಮಕ್ಕಳು ಚಾಚೂತಪ್ಪದೆ ಆ ವಾಕ್ಯವನ್ನು ಏಕಕಂಠದಿಂದ ಪುನರುಚ್ಚರಿಸುತ್ತವೆ. ‘‘ನಮಗೆ ಸ್ವಾತಂತ್ರ ದೊರೆತು ಎಷ್ಟು ವರ್ಷವಾಯಿ ತು?’ ಎಂದು ಆತ ಕೇಳುತ್ತಾನೆ. ಆಗ ಮಕ್ಕಳೆಲ್ಲಾ 33 ವರ್ಷಗಳು ಎಂದು ಒಕ್ಕೊರಲಿನಿಂದ ಕೂಗುತ್ತಾರೆ. ಆತ ಎಷ್ಟು ವರ್ಷ ಎಂದು ಮತ್ತೊಮ್ಮೆ ಕೇಳುತ್ತಾನೆ. ‘‘33 ವರ್ಷಗಳು’’ ಮತ್ತೆ ಮಕ್ಕಳು ಗಟ್ಟಿ ಧ್ವನಿ ಯಲ್ಲಿ ಉರುಹೊಡೆಯುತ್ತವೆ.

ದೇಶದ ಇತರ ಭಾಗಗಳ ಹಾಗೆ, ತಮಿಳುನಾಡು ಕೂಡಾ ಕಳೆದ 140 ವರ್ಷಗಳಿಂದ ಭೀಕರ ಬರಗಾಲವನ್ನು ಎದುರಿ ಸುತ್ತಿದೆ. ಇದನ್ನು ನೀವು ಬಾಲಚಂದರ್ ಅವರ ಭವಿಷ್ಯ ಜ್ಞಾನ ಎಂದು ಕರೆಯಿರಿ ಅಥವಾ ಜನತೆಗೆ ಕುಡಿಯುವ ನೀರಿನ ನಿರಾಕರಣೆ ಅಥವಾ ನೀರು ಒದಗಿಸುವಲ್ಲಿ ಭಾರತ ಸರಕಾ ರದ ವೈಫಲ್ಯ ಎಂದು ಬೇಕಾದರೂ ಕರೆಯಿರಿ. ಒಟ್ಟಿನಲ್ಲಿ ಈ ಚಿತ್ರ ಬಿಡುಗಡೆಗೊಂಡು 36 ವರ್ಷಗಳಾದರೂ ನೀರಿನ ಅಭಾವವು ಆಧುನಿಕ ಭಾರತದಲ್ಲೂ ಮುಂದುವರಿದಿದೆ.

ಸರಿತಾ, ರಾಧಾ ರವಿ ಹಾಗೂ ಗುಹನ್ ಮುಖ್ಯಪಾತ್ರ ಗಳಲ್ಲಿ ನಟಿಸಿರುವ ತನ್ನೀರ್, ತನ್ನೀರ್ ಚಿತ್ರವು ಕೋಮಲ್ ಸ್ವಾಮಿನಾಥನ್ (ಅವರೂ ಕೂಡಾ ಈ ಚಿತ್ರದಲ್ಲಿ ನಟಿಸಿ ದ್ದಾರೆ) ಅವರ ತಮಿಳುನಾಟಕವನ್ನು ಆಧರಿಸಿದ್ದಾಗಿದೆ. ಈ ಚಿತ್ರವು ಮೂರು ಪಾತ್ರಗಳ ಸುತ್ತವೇ ತಿರುಗುತ್ತದೆ.

ತನ್ನ ಊರನ್ನು ಕಾಡುವ ನೀರಿನ ಬರವನ್ನು ಹೋಗಲಾ ಡಿಸಲು ಅತ್ತಿಪಟ್ಟಿ ಗ್ರಾಮದ ಶಿಕ್ಷಕ (ಸ್ವಾಮಿ ನಾಥನ್) ಪಂಚಾ ಯತ್ ಸಭೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿರುತ್ತಾನೆ. ಸರಕಾರ ಹಾಗೂ ಪೌರಾಡಳಿತ ಇಲಾಖೆಯ ಅಧಿಕಾರಿಗಳಿಗೆ ತನ್ನ ಗ್ರಾಮವು ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ನಿವಾರಿಸುವಂತೆ ಅಂಗಲಾಚುತ್ತಿರುತ್ತಾನೆ. ನಾಯಕಿ ಸೇವಂತಿ (ಸರಿತಾ), ಕಂಕುಳಲ್ಲಿ ನವಜಾತ ಶಿಶುವನ್ನು ಹಿಡಿದು ಕೊಂಡು, ತಲೆಯಲ್ಲಿ ಎರಡು ಗಡಿಗೆ ಯನ್ನು ಎತ್ತಿಕೊಂಡು ಹಳ್ಳಿಯ ಹೊರಭಾಗದಲ್ಲಿರುವ ಕೆರೆಗೆ ನೀರು ತರಲು ಪ್ರತಿದಿನವೂ ಅಲೆಯುುತ್ತಾಳೆ. ಜೈಲಿನಿಂದ ತಪ್ಪಿಸಿಕೊಂಡ ಅಪರಾಧಿ ವೆಳ್ಳೈಸ್ವಾಮಿ ಎಂಬಾತ ಈ ಹಳ್ಳಿ ಯಲ್ಲಿ ಅಶ್ರಯ ಪಡೆದುಕೊಳ್ಳುತ್ತಾನೆ. ಇದಕ್ಕೆ ಪ್ರತಿಯಾಗಿ ಆತ ಹಳ್ಳಿಯ ನೀರಿನ ಸಮಸ್ಯೆಯನ್ನು ಪರಿಹರಿಸಲು ಮಾರ್ಗ ವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ.

ಅತ್ತಿಪಟ್ಟಿಯನ್ನು ದಶಕದಿಂದ ಕಾಡುತ್ತಿರುವ ಬರವು ಆ ಗ್ರಾಮದ ಪ್ರತಿಯೊಬ್ಬ ನಿವಾಸಿಯ ಮೇಲೂ ದುಷ್ಪರಿಣಾಮ ಬೀರಿರುತ್ತದೆ. ಅತ್ತಿಪಟ್ಟಿಯಲ್ಲಿನ ಕುಟುಂಬಗಳ ಜೊತೆ ವಿವಾಹ ನೆಂಟಸ್ಥಿಕೆ ಬೆಳೆಸಲು ಬೇರೆ ಗ್ರಾಮಗಳ ಯಾರೂ ಕೂಡಾ ಮುಂದೆ ಬರುವುದಿಲ್ಲ. ಗ್ರಾಮಸ್ಥರು ಕದ್ದ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಹೊರಗಿನವರಿಗೆ ಮನೆಯಲ್ಲಿ ಉಳಿದು ಕೊಳ್ಳಲು ಗ್ರಾಮಸ್ಥರು ಸಿದ್ಧರಿರುತ್ತಾರಾದರೂ, ನೀರು ಕೇಳಿದರೆ ಮಾತ್ರ ಸಿಟ್ಟಿಗೇಳುತ್ತಾರೆ.

ನೀರಿನ ದಾಹದಿಂದ ಕಂಗೆಟ್ಟಿರುವ ಅತ್ತಿಪಟ್ಟಿಯ ಶೋಚ ನೀಯ ಪರಿಸ್ಥಿತಿಯ ಬಗ್ಗೆ ಸರಕಾರದ ಗಮನಸೆಳೆಯಲು ನಡೆಯುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತವೆ. ಗ್ರಾಮದ ನೀರಿನ ಸಮಸ್ಯೆ ಬಗೆಹರಿಸುವಂತೆ ಕೋರಿ ಸರಕಾರಕ್ಕೆ ಸಲ್ಲಿಸಿದ ಮನವಿಯು ಅಧಿಕಾರಿಶಾಹಿಯ ಕೆಂಪುಪಟ್ಟಿಯಿಂದಾಗಿ ಮೂಲೆಗುಂಪಾಗುತ್ತದೆ. ಬರ ಪೀಡಿತ ಗ್ರಾಮದ ಬಗ್ಗೆ ಪತ್ರಕರ್ತನೊಬ್ಬ ಬರೆದ ವರದಿಯು ಪತ್ರಿಕೆಯಲ್ಲಿ ಪ್ರಕಟವಾಗುವುದೇ ಇಲ್ಲ. ಹಳ್ಳಿಗೆ ನೀರಿನ ಕಾಲು ವೆಯನ್ನು ನಿರ್ಮಿಸುವ ಪ್ರಯತ್ನಕ್ಕೆ ಮುನ್ಸಿ ಪಲ್ ಇಂಜಿನಿ ಯರ್ ಹಾಗೂ ಪೊಲೀಸರು ಅಡ್ಡಗಾಲು ಹಾಕುತ್ತಾರೆ.

ಇಂತಹ ನಿರಾಶೆಯ ವಾತಾವರಣದ ಕೊನೆಗೆ ಭರವಸೆ ಯ ಬೆಳಕು ಇದೆಯೆಂದು ಬಿಂಬಿಸಿ, ಪ್ರೇಕ್ಷಕರನ್ನು ತಪ್ಪುದಾರಿ ಗೆಳೆಯಲು ಬಾಲಚಂದರ್ ಪ್ರಯತ್ನಿಸುವುದಿಲ್ಲ. ಅವರು ಅಧಿಕಾರಶಾಹಿಯು ಹೇಗೆ ಜನಸಾಮಾನ್ಯರ ಬದುಕನ್ನು ತ್ರಾಸಗೊಳಿಸುತ್ತದೆಯೆಂಬುದನ್ನು ವಿಡಂಬನಾತ್ಮ ಕವಾಗಿ ಚಿತ್ರಿಸಿದ್ದಾರೆ. ಚಿತ್ರದ ಅತ್ಯುತ್ತಮವೆನ್ನಬಹುದಾದ ಸನ್ನಿವೇಶ ಗಳಲ್ಲೊಂದರಲ್ಲಿ, ನೀರಿನ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಸರ ಕಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಸಚಿವ ಅದನ್ನು ತನ್ನ ಕಾರ್ಯದ ರ್ಶಿಯ ಕೈಗಿಟ್ಟು, ತುರ್ತು ವಿಷಯವೆಂದು ಹೇಳಿಬಿ ಡುತ್ತಾನೆ.

ಕಾರ್ಯದರ್ಶಿಯು ತಕ್ಷಣವೇ ಇದನ್ನು ತುರ್ತು ವಿಷಯವೆಂದು ನೆನಪಿಸಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸುತ್ತಾನೆ. ಜಿಲ್ಲಾಧಿಕಾರಿ ಇದನ್ನು ಇನ್ನೊಂದು ಅಧಿಕಾರಿಗೆ ವರ್ಗಾಯಿಸು ತ್ತಾನೆ. ಆತ ಅದನ್ನು ಇನ್ನೋರ್ವ ಅಧಿಕಾರಿಗೆ ಹಸ್ತಾಂತರಿಸಿ ದರೆ, ಆತ ಅದನ್ನು ತಹಶೀಲ್ದಾರ್‌ಗೆ ತಲುಪಿ ಸುತ್ತಾನೆ. ತಹ ಶೀಲ್ದಾರ್ ಮನವಿಪತ್ರವನ್ನು ತನ್ನ ಜವಾನನ ಕೈಗಿಡುತ್ತಾನೆ. ಆತ ಅದನ್ನು ಕಿಸೆಯಲ್ಲಿಟ್ಟುಕೊಳ್ಳುತ್ತಾನೆ.

ನಟ, ನಟಿಯರ ಉತ್ಕೃಷ್ಟ ಅಭಿನಯದ ಈ ಚಿತ್ರಕ್ಕೆ ಅತ್ಯಂತ ಶ್ರೀಮಂತವಾದ ಚಿತ್ರಕಥೆಯು ಇನ್ನಷ್ಟು ಕಸುವನ್ನು ತುಂಬಿದೆ. ಕೆಲವು ಸಂಗತಿಗಳನ್ನು ಸಾಂಕೇತಿಕ ರೂಪದಲ್ಲಿ ತೋರಿಸಿ ರುವುದು ಚಿತ್ರವನ್ನು ಪ್ರಭಾವಶಾಲಿಯಾಗಿಸಿದೆ. ಚಿತ್ರದ ಒಂದು ದೃಶ್ಯದಲ್ಲಿ ನಾಯಕಿ ಸೇವಂತಿಯು, ಮರವೊಂದರ ಗೆಲ್ಲುಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಧ್ವಜಗಳನ್ನು ಕಟ್ಟಿರುವುದನ್ನು ಬೆಟ್ಟು ಮಾಡಿ ತೋರಿಸುತ್ತಾಳೆ. ಅದನ್ನು ಕಂಡು ವೆಳ್ಳೈಸ್ವಾಮಿಯು ಅತ್ತಿಪಟ್ಟಿಯಂತಹ ಗ್ರಾಮದಲ್ಲಿ ಹಲವಾರು ರಾಜಕೀಯ ಪಕ್ಷಗಳಿವೆ. ಈ ಮರ ಅವುಗಳ ಭಾರವನ್ನು ತಾಳಿಕೊಳ್ಳಬಲ್ಲುದೇ? ಎಂದು ವೆಳ್ಳೈಸ್ವಾಮಿ ಪ್ರಶ್ನಿಸುತ್ತಾನೆ. ಆಗ ಸೇವಂತಿ ಮುಗುಳ್ನಗುತ್ತಾ, ‘‘ಹೀಗಾ ಗಿಯೇ ಆ ಮರ ಬರಡಾಗಿದೆ’ ಎನ್ನುತ್ತಾಳೆ.

ಕೊನೆಗೆ ಈ ಧ್ವಜಗಳು ಕೆರೆಗೆ ವರ್ಗಾವಣೆಗೊಳ್ಳುತ್ತವೆ. ಹಳ್ಳದ ಇಂಚಿಂಚೂ ಜಾಗವನ್ನೂ ರಾಜಕೀಯ ಪಕ್ಷದ ಧ್ವಜ ಗಳು ಆಕ್ರಮಿಸಿಕೊಳ್ಳುತ್ತವೆ ಮತ್ತು ಅಲ್ಲಿ ಸಾಮಾನ್ಯ ನಾಗರಿಕನಿಗೆ ಏನೂ ಉಳಿದಿರುವುದಿಲ್ಲ.

 ದೇಶದ ಇತರ ಭಾಗಗಳ ಹಾಗೆ, ತಮಿಳುನಾಡು ಕೂಡಾ ಕಳೆದ 140 ವರ್ಷಗಳಿಂದ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಇದನ್ನು ನೀವು ಬಾಲಚಂದರ್ ಅವರ ಭವಿಷ್ಯ ಜ್ಞಾನಎಂದು ಕರೆಯಿರಿ ಅಥವಾ ಜನತೆಗೆ ಕುಡಿಯುವ ನೀರಿನ ನಿರಾಕರಣೆ ಅಥವಾ ನೀರು ಒದಗಿಸುವಲ್ಲಿ ಭಾರತ ಸರಕಾ ರದ ವೈಫಲ್ಯ ಎಂದು ಬೇಕಾದರೂ ಕರೆಯಿರಿ. ಒಟ್ಟಿನಲ್ಲಿ ಈ ಚಿತ್ರ ಬಿಡುಗಡೆಗೊಂಡು 36 ವರ್ಷಗಳಾದರೂ ನೀರಿನ ಅಭಾವವು ಆಧುನಿಕ ಭಾರತದಲ್ಲೂ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News